ಬಂಟ್ವಾಳ : ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ಕಳವು - Karavali Times ಬಂಟ್ವಾಳ : ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ಕಳವು - Karavali Times

728x90

30 August 2023

ಬಂಟ್ವಾಳ : ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ಕಳವು

ಬಂಟ್ವಾಳ, ಆಗಸ್ಟ್ 31, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ನಿವಾಸಿ ಕೆ ಅಬ್ದುಲ್ ಮಜೀದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಚಿನ್ನಾಭರಣ ಕಳವುಗೈದು ಪರಾರಿಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮಜೀದ್ ಅವರು ಆಗಸ್ಟ್ 28 ರಂದು ರಾತ್ರಿ ಮನೆಗೆ ಬೀಗ ಹಾಕಿ ಪತ್ನಿಯ ಜೊತೆ ಮಗಳ ಮನೆಯಾದ ಮಂಗಳೂರಿಗೆ ತೆರಳಿದ್ದರು. ಆಗಸ್ಟ್ 30 ರಂದು ಬೆಳಿಗ್ಗೆ ಸ್ಥಳೀಯ ನಿವಾಸಿ ನಝೀರ್ ಎಂಬವರು ಕರೆ ಮಾಡಿ ಮನೆಯ ಮುಂಬಾಗಿಲಿನ ಡೋರ್ ತೆರೆದಿರುವ ಬಗ್ಗೆ ತಿಳಿಸಿದ ಹಿನ್ನಲೆಯಲ್ಲಿ ಮಜೀದ್ ಅವರು ಬಂದು ಮನೆ ಪರಿಶೀಲಿಸಿದಾಗ ಮನೆಯಲ್ಲಿದ್ದ 15 ಸಾವಿರ ರೂಪಾಯಿ ನಗದು, ಸುಮಾರು 30 ಸಾವಿರ ರೂಪಾಯಿ ಮೌಲ್ಯದ ವಾಚ್ ಹಾಗೂ 85 ಸಾವಿರ ರೂಪಾಯಿ ಮೌಲ್ಯದ ಸುಮಾರು 16 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಜೀದ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2023 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ಕಳವು Rating: 5 Reviewed By: karavali Times
Scroll to Top