ಬಂಟ್ವಾಳ, ಆಗಸ್ಟ್ 22, 2023 (ಕರಾವಳಿ ಟೈಮ್ಸ್) : ವಿಟ್ಲ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಿಂದ ಸೋಮವಾರ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳಾದ ದೀಕ್ಷಿತ್ (15) ಹಾಗೂ ಗಗನ್ (14) ಎಂಬವರು ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಅವರನ್ನು ಪುತ್ತೂರು ಪೊಲೀಸರು ವಿಚಾರಣೆ ನಡೆಸಿ ಪೋಷಕರಿ ಮಾಹಿತಿ ನೀಡಿ ಬಳಿಕ ವಿಟ್ಲ ಹಾಸ್ಟೆಲ್ ಸುಪರ್ದಿಗೆ ಒಪ್ಪಿಸಿದ್ದಾರೆ.
ಬಾಲಕರಿಬ್ಬರು ಮನೆಯವರನ್ನು ನೋಡುವ ಸಲುವಾಗಿ ಹಾಸ್ಟೆಲಿನಿಂದ ಯಾವುದೇ ಪರವಾನಿಗೆ ಪಡೆಯದೆ ಹಾಗೂ ಮಾಹಿತಿ ನೀಡದೆ ಸೋಮವಾರ ವಿಟ್ಲದಿಂದ ಪುತ್ತೂರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ತಮ್ಮ ಊರಾದ ಚಿತ್ರದುರ್ಗಕ್ಕೆ ತೆರಳಲು ಹಣದ ಕೊರೆತಯಿಂದಾಗಿ ಪುತ್ತೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೇಳೆ ಗಮನಿಸಿದ ಪುತ್ತೂರು ನಗರ ಠಾಣಾ ಪೊಲೀಸರು ವಿದ್ಯಾರ್ಥಿಗಳನ್ನು ವಿಚಾರಿಸಿ ವಿಷಯ ತಿಳಿದುಕೊಂಡು ಪೋಷಕರಿಗೆ ಮಾಹಿತಿ ನೀಡಿ ಬಳಿಕ ಹಾಸ್ಟೆಲ್ ಸುಪರ್ದಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಟ್ಲ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲಿನಲ್ಲಿದ್ದ ಈ ಇಬ್ಬರು ಬಾಲಕರು ಸೋಮವಾರ ಶಾಲೆಗೆಂದು ತೆರಳಿದವರು ಶಾಲೆಗೂ ಹೋಗದೆ, ಹಾಸ್ಟೆಲಿಗೂ ವಾಪಾಸಾಗದೆ, ಅತ್ತ ತಮ್ಮ ಊರು ಅಥವಾ ಮನೆಗೂ ತೆರಳದೆ ನಾಪತ್ತೆಯಾಗಿದ್ದರು. ಈ ಬಗ್ಗೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಪ್ರಮೀಳಾ ಅವರು ಪೊಲೀಸರಿಗೆ ವಿದ್ಯಾರ್ಥಿಗಳು ನಾಪತ್ತೆ ದೂರು ನೀಡಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 148/2023 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಕರು ಪುತ್ತೂರು ನಗರದಲ್ಲಿ ಪತ್ತೆಯಾಗಿರುವುದರಿಂದ ಪ್ರಕರಣ ಸುಖಾಂತ್ಯಗೊಂಡಿದೆ.
0 comments:
Post a Comment