ಮಹಿಳೆಯ ಸ್ನಾನದ ವೀಡಿಯೋ ಮಾಡಿದ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಂದ ಅರೋಪಿ ವಶಕ್ಕೆ - Karavali Times ಮಹಿಳೆಯ ಸ್ನಾನದ ವೀಡಿಯೋ ಮಾಡಿದ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಂದ ಅರೋಪಿ ವಶಕ್ಕೆ - Karavali Times

728x90

29 August 2023

ಮಹಿಳೆಯ ಸ್ನಾನದ ವೀಡಿಯೋ ಮಾಡಿದ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಂದ ಅರೋಪಿ ವಶಕ್ಕೆ

ಬಂಟ್ವಾಳ, ಆಗಸ್ಟ್ 29, 2023 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವ ಮಹಿಳೆ ತನ್ನ ಮನೆಯ ಸ್ನಾಗೃಹದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ಮೂಲಕ ಸೆರೆ ಹಿಡಿದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿ ಬಂಟ್ವಾಳ ನಿವಾಸಿ ಜಗದೀಪ್ ಆಚಾರ್ಯ (32) ಎಂಬಾತನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಸೋಮವಾರ ರಾತ್ರಿ ಮಹಿಳೆ ಎಂದಿನಂತೆ ತಮ್ಮ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭ ಮನೆಯ ಹೊರಗಡೆಯಿಂದ ಗೋಡೆಯ ಸೆರೆಯ ಮಧ್ಯೆ ಮೊಬೈಲ್ ಮೂಲಕ ಸ್ನಾನ ಮಾಡುವ ದೃಶ್ಯ ಸೆರೆ ಹಿಡಿಯುತ್ತಿರುವುದು ಗಮನಕ್ಕೆ ಬಂದ ತಕ್ಷಣ ಮಹಿಳೆ ಬೊಬ್ಬೆ ಹಾಕಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. 

ಬಳಿಕ ಮಹಿಳೆಯ ತಾಯಿ ಹಾಗೂ ನೆರೆಕರೆಯವರು ಸೇರಿಕೊಂಡು ಪರಿಸರದಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ. ಆದರೆ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಹಿಳೆಯ ಸ್ನಾನದ ವೀಡಿಯೋ ಮಾಡಿದ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಂದ ಅರೋಪಿ ವಶಕ್ಕೆ Rating: 5 Reviewed By: karavali Times
Scroll to Top