ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಿಲಾದುನ್ನಬೀ ಸ್ವಲಾತ್ ಮೆರವಣಿಗೆ - Karavali Times ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಿಲಾದುನ್ನಬೀ ಸ್ವಲಾತ್ ಮೆರವಣಿಗೆ - Karavali Times

728x90

28 September 2023

ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಿಲಾದುನ್ನಬೀ ಸ್ವಲಾತ್ ಮೆರವಣಿಗೆ

ಬಂಟ್ವಾಳ, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮ ಮಸೀದಿ, ತಹ್ಲೀಮುಲ್ ಇಸ್ಲಾಂ ಮದ್ರಸ ಹಾಗೂ ನೂರಾನಿಯಾ ಅರಬಿಕ್ ದರ್ಸ್ ವತಿಯಿಂದ ಅಂತ್ಯಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸ್ವಲಾತ್ ಮೆರವಣಿಗೆಯು ಗುರುವಾರ ನಡೆಯಿತು.

ಮಸೀದಿ ಮುದರ್ರಿಸ್ ಅಲ್-ಹಾಜ್ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ರ್ಯಾಲಿಗೆ ಚಾಲನೆ ನೀಡಿದರು. ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ಸಹಿತ ಪ್ರಮುಖರು ಭಾಗಹಿಸಿದ್ದರು. ಮೆರವಣಿಗೆ ಮಸೀದಿಯಿಂದ ಹೊರಟು ಆಲಡ್ಕ-ಬಂಗ್ಲೆಗುಡ್ಡ ಮಾರ್ಗವಾಗಿ ನಂದಾವರ ಮೂಲಕ ಸಾಗಿ ಮಾರ್ನಬೈಲು-ಮೆಲ್ಕಾರ್ ಮಾರ್ಗವಾಗಿ ಮತ್ತೆ ಆಲಡ್ಕದಲ್ಲಿ ಸಮಾಪ್ತಿಗೊಂಡಿತು. 

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಿಲಾದುನ್ನಬೀ ಸ್ವಲಾತ್ ಮೆರವಣಿಗೆ Rating: 5 Reviewed By: karavali Times
Scroll to Top