ಮೆಲ್ಕಾರ್ ಸೂಪರ್ ಬಜಾರ್ ಬಳಿ ನಿಲ್ಲಿಸಿದ್ದ ಬೈಕ್ ಕಳವು : ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಮೆಲ್ಕಾರ್ ಸೂಪರ್ ಬಜಾರ್ ಬಳಿ ನಿಲ್ಲಿಸಿದ್ದ ಬೈಕ್ ಕಳವು : ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

19 October 2023

ಮೆಲ್ಕಾರ್ ಸೂಪರ್ ಬಜಾರ್ ಬಳಿ ನಿಲ್ಲಿಸಿದ್ದ ಬೈಕ್ ಕಳವು : ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಅಕ್ಟೋಬರ್ 19, 2023 (ಕರಾವಳಿ ಟೈಮ್ಸ್) : ಮೆಲ್ಕಾರ್ ಸೂಪರ್ ಬಜಾರ್ ಸಮೀಪ ನಿಲ್ಲಿಸಲಾಗಿದ್ದ ಬೈಕ್ ಕಳವಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಸಜಿಪಮೂಡ ಗ್ರಾಮದ ನಿವಾಸಿ ಕೃಷ್ಣಪ್ಪ ಅವರು ಬುಧವಾರ ಸಂಜೆ ಮೆಲ್ಕಾರ್ ಸೂಪರ್ ಬಜಾರ್ ಬಳಿ ತನ್ನ ಬೈಕ್ ನಿಲ್ಲಿಸಿ ತೆರಳಿದ್ದರು. ಬಳಿಕ ಬಂದು ನೋಡಿದಾಗ ಬೈಕ್ ಕಳವಾಗಿದೆ. ಈ ಬಗ್ಗೆ ಪರಿಸರದಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ. ಕಳವಾಗಿರುವ ಬೈಕಿನ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಆಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರ್ ಸೂಪರ್ ಬಜಾರ್ ಬಳಿ ನಿಲ್ಲಿಸಿದ್ದ ಬೈಕ್ ಕಳವು : ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top