ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಹಲವು ಮನೆಗಳಿಗೆ ಹಾನಿ : ಲಕ್ಷಾಂತರ ರೂಪಾಯಿ ನಷ್ಟ - Karavali Times ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಹಲವು ಮನೆಗಳಿಗೆ ಹಾನಿ : ಲಕ್ಷಾಂತರ ರೂಪಾಯಿ ನಷ್ಟ - Karavali Times

728x90

11 October 2023

ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಹಲವು ಮನೆಗಳಿಗೆ ಹಾನಿ : ಲಕ್ಷಾಂತರ ರೂಪಾಯಿ ನಷ್ಟ

ಬಂಟ್ವಾಳ, ಅಕ್ಟೋಬರ್ 11, 2023 (ಕರಾವಳಿ ಟೈಮ್ಸ್) : ಮಂಗಳವಾರ ರಾತ್ರಿ ತಾಲೂಕಿನಲ್ಲಿ ಸುರಿದ ಭಾರೀ ಮಳೆ ಹಾಗೂ ಸಿಡಿಲಾಘಾತಕ್ಕೆ ಹಲವೆಡೆ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ. ಸಜಿಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಅಬ್ದುಲ್ ರಝಾಕ್ ಬಿನ್ ಅದ್ದ ಬ್ಯಾರಿ ಅವರ ಮನೆಗೆ, ಸಾಲೆತ್ತೂರು ಗ್ರಾಮದ ಮೆದು-ಕೂಡುರಸ್ತೆ ನಿವಾಸಿ ಹಮೀದ್ ಅವರ ಮನೆಗೆ, ಬೋಳಂತೂರು ಗ್ರಾಮದ ಸುರಿಬೈಲ್ ನಿವಾಸಿ ಅಬ್ದುಲ್ ಖಾದರ್ ಅವರ ಮನೆಗೆ, ಇಡ್ಕಿದು ಗ್ರಾಮದ ಅರ್ಕೆಚಾರು ನಿವಾಸಿ ತೋಮಸ್ ಅವರ ಮನೆಗೆ, ಬಾಳ್ತಿಲ ಗ್ರಾಮದ ಸುಧೆಕಾರು ನಿವಾಸಿ ಶೀನ ಬಿನ್ ಮಾಂಕು ಅವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಸಿಡಿಲು ಬಡಿದು ಹಾನಿಯಾಗಿರುತ್ತದೆ. ಯಾವುದೇ ವ್ಯಕ್ತಿಗಳಿಗೆ ಗಾಯ ಅಥವಾ ಜೀವಹಾನಿಯಾಗಿರುವುದಿಲ್ಲ ಎಂದು ಬಂಟ್ವಾಳ ತಾಲೂಕು ಕಚೇರಿ ಮಾಹಿತಿ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಹಲವು ಮನೆಗಳಿಗೆ ಹಾನಿ : ಲಕ್ಷಾಂತರ ರೂಪಾಯಿ ನಷ್ಟ Rating: 5 Reviewed By: karavali Times
Scroll to Top