ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರ ದಸ್ತಗಿರಿ - Karavali Times ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರ ದಸ್ತಗಿರಿ - Karavali Times

728x90

11 December 2023

ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರ ದಸ್ತಗಿರಿ

 ಬಂಟ್ವಾಳ, ಡಿಸೆಂಬರ್ 12, 2023 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ಬಂಟ್ವಾಳ ಸಮೀಪದ ಟಿಪ್ಪು ನಗರ ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ನಗರ ಠಾಣಾಧಿಕಾರಿ ರಾಮಕೃಷ್ಣ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ದನಗಳನ್ನು ಸಾಗಾಟ ಮಾಡುತ್ತಿದ್ದ KA-19-MF-4460 ನೋಂದಣಿ ಸಂಖ್ಯೆಯ ಓಮ್ನಿ ಕಾರನ್ನು ಪೊಲೀಸರು ತಡೆದಾಗ‌, ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೋರ್ವ  ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಬಂಧಿತ ಆರೋಪಿಗಳನ್ನು ಓಮ್ನಿ ಕಾರು ಚಾಲಕ, ಪುದು ಗ್ರಾಮದ ಮಾರಿಪಳ್ಳ ನಿವಾಸಿ ಜಾಬಿರ್ (24) ಹಾಗೂ ಲೊರೆಟ್ಟೊಪದವು ಸಮೀಪದ ಟಿಪ್ಪು ನಗರ ನಿವಾಸಿ ಅಬ್ದುಲ್ ನಾಸೀರ್ (32) ಎಂದು ಹೆಸರಿಸಲಾಗಿದೆ.

ವಾಹನದಲ್ಲಿ  ಪರಿಶೀಲಿಸಿದಾಗ 5 ಜಾನುವಾರುಗಳು ಕಂಡುಬಂದಿದ್ದು, , ಜಾನುವಾರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ಕಾರನ್ನು ವಶಕ್ಕೆ ಪಡೆದು, ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2023 ಕಲಂ 5, 7, 12   ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020,

ಹಾಗೂ  ಕಲಂ:  11 The Prevention of Cruelty to Animals Act 1960  ಮತ್ತು ಕಲಂ 379 ಜೊತೆಗೆ 34 ಐಪಿಸಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರ ದಸ್ತಗಿರಿ Rating: 5 Reviewed By: lk
Scroll to Top