ಬಂಟ್ವಾಳ : 13ನೇ ವರ್ಷದ ಮೂಡೂರು-ಪಡೂರು ಕಂಬಳದ ಪೂರ್ವಭಾವಿ ಸಭೆ - Karavali Times ಬಂಟ್ವಾಳ : 13ನೇ ವರ್ಷದ ಮೂಡೂರು-ಪಡೂರು ಕಂಬಳದ ಪೂರ್ವಭಾವಿ ಸಭೆ - Karavali Times

728x90

15 December 2023

ಬಂಟ್ವಾಳ : 13ನೇ ವರ್ಷದ ಮೂಡೂರು-ಪಡೂರು ಕಂಬಳದ ಪೂರ್ವಭಾವಿ ಸಭೆ

ಬಂಟ್ವಾಳ, ಡಿಸೆಂಬರ್ 16, 2023 (ಕರಾವಳಿ ಟೈಮ್ಸ್) : 13 ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳ ಇದರ ಪೂರ್ವಭಾವಿ ಸಭೆಯು ನಾವೂರು-ಕೂಡಿಬೈಲು ಕಂಬಳ ಗದ್ದೆಯಲ್ಲಿ ಶುಕ್ರವಾರ ಸಂಜೆ ನಡೆಯಿತು. 

ಬಂಟ್ವಾಳ ಕಂಬಳದ ಗೌರವಾಧ್ಯಕ್ಷ, ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ವಹಿಸಿದ್ದರು. 

ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಜನಾರ್ದನ ಚೆಂಡ್ತಿಮಾರ್, ಹಸೈನಾರ್ ತಾಳಿಪಡ್ಪು, ಲೋಲಾಕ್ಷ ಶೆಟ್ಟಿ, ಪ್ರಮುಖರಾದ ಹಾಜಿ ಬಿ ಎಚ್ ಖಾದರ್, ಬಿ ಪದ್ಮಶೇಖರ ಜೈನ್, ಸಂಪತ್ ಕುಮಾರ್ ಶೆಟ್ಟಿ, ಸುರೇಶ್ ಪೂಜಾರಿ ಜೋರಾ, ವೆಂಕಪ್ಪ ಪೂಜಾರಿ, ಗಣೇಶ್ ಶೆಟ್ಟಿ ಗೋಳ್ತಮಜಲು, ಸ್ಟೀವನ್ ಡಿ’ಸೋಜ ಸಹಿತ ಹಲವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : 13ನೇ ವರ್ಷದ ಮೂಡೂರು-ಪಡೂರು ಕಂಬಳದ ಪೂರ್ವಭಾವಿ ಸಭೆ Rating: 5 Reviewed By: karavali Times
Scroll to Top