ವರ್ಗಾವಣೆಗೊಂಡ ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರಿಗೆ ಬೀಳ್ಕೊಡುಗೆ - Karavali Times ವರ್ಗಾವಣೆಗೊಂಡ ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರಿಗೆ ಬೀಳ್ಕೊಡುಗೆ - Karavali Times

728x90

29 January 2024

ವರ್ಗಾವಣೆಗೊಂಡ ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರಿಗೆ ಬೀಳ್ಕೊಡುಗೆ

ಬಂಟ್ವಾಳ, ಜನವರಿ 29, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಎಸ್ ಬಿ ಕೂಡಲಗಿ ಅವರು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ತಹಶೀಲ್ದಾರರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಜನವರಿ 29 ರಂದು ಸೋಮವಾರ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ತಹಶೀಲ್ದಾರ್ ಅರ್ಚನಾ ಭಟ್ ಮಾತನಾಡಿ, ಹೊಸತನ್ನು ಕಲಿಯುವ ಛಲ ಮತ್ತು ಧೈರ್ಯ ಇದ್ದರೆ ಯಾವುದೇ ಕರ್ತವ್ಯವನ್ನಾದರೂ ಸುಲಭವಾಗಿ ನಿರ್ವಹಿಸಬಹುದು. ತಾಲೂಕು ಆಡಳಿತದ ಯಶಸ್ಸಿಗೆ ಎಲ್ಲರೂ ಒಂದಾಗಿ ದುಡಿಯೋಣ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರು ಬಂಟ್ವಾಳ ತಾಲೂಕಿನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಅತ್ಯುತ್ತಮವಾದ ಸಹಕಾರ ನೀಡಿದ್ದರಿಂದಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು. 

ಬಂಟ್ವಾಳ ತಾಲೂಕು ಕಛೇರಿ ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ತಹಶೀಲ್ದಾರರಿಗೆ ಶುಭ ಹಾರೈಸಿದರು.

ಈ ಸಂದರ್ಭ ಉಪತಹಸೀಲ್ದಾರ್ ಗಳಾದ ನರೇಂದ್ರನಾಥ ಮಿತ್ತೂರು, ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಜನಾರ್ಧನ ಜೆ, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು. 

ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ವಂದಿಸಿ, ಉಪತಹಶೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ವರ್ಗಾವಣೆಗೊಂಡ ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರಿಗೆ ಬೀಳ್ಕೊಡುಗೆ Rating: 5 Reviewed By: karavali Times
Scroll to Top