ಫೆಬ್ರವರಿ 24 ರಂದು (ನಾಳೆ) ಬಿ ಸಿ ರೋಡಿನ ಅಲೆತ್ತೂರಿನಲ್ಲಿ 25ನೇ ವರ್ಷದ ಶನೈಶ್ಚರ ಪೂಜೆ, 42ನೇ ವರ್ಷದ ವಾರ್ಷಿಕೋತ್ಸವ - Karavali Times ಫೆಬ್ರವರಿ 24 ರಂದು (ನಾಳೆ) ಬಿ ಸಿ ರೋಡಿನ ಅಲೆತ್ತೂರಿನಲ್ಲಿ 25ನೇ ವರ್ಷದ ಶನೈಶ್ಚರ ಪೂಜೆ, 42ನೇ ವರ್ಷದ ವಾರ್ಷಿಕೋತ್ಸವ - Karavali Times

728x90

23 February 2024

ಫೆಬ್ರವರಿ 24 ರಂದು (ನಾಳೆ) ಬಿ ಸಿ ರೋಡಿನ ಅಲೆತ್ತೂರಿನಲ್ಲಿ 25ನೇ ವರ್ಷದ ಶನೈಶ್ಚರ ಪೂಜೆ, 42ನೇ ವರ್ಷದ ವಾರ್ಷಿಕೋತ್ಸವ

 ಬಂಟ್ವಾಳ, ಫೆಬ್ರವರಿ 23, 2024 (ಕರಾವಳಿ ಟೈಮ್ಸ್) :  ಬಿ ಸಿ ರೋಡಿನ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ) ಇದರ 2 ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ 42ನೇ ವಾರ್ಷಿಕೋತ್ಸವ ಸಮಾರಂಭ ಮಾರ್ಚ್ 24 ರಂದು ಶನಿವಾರ ಸಂಸ್ಥೆಯ ಗೌರವಾಧ್ಯಕ್ಷ ನೇಮಿರಾಜ ಶೆಟ್ಟಿ ಕೊಡಂಗೆ ಅವರ ಅಧ್ಯಕ್ಷತೆಯಲ್ಲಿ ಅಲೆತ್ತೂರು ಮಂಗಳ ಭವನದಲ್ಲಿ ನಡೆಯಲಿದೆ.

 ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ, ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಮಾಧ್ಯಮ ಪ್ರಮುಖ ಸಂದೇಶ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು, ಬೆಂಗಳೂರು ಕಬಡ್ಡಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ, ಪ್ರಮುಖರಾದ ಸತೀಶ್ ಭಂಡಾರಿ ಕುಲತಬೆಟ್ಟು, ಚರಣ್ ಜುಮಾದಿಗುಡ್ಡೆ, ಬಿ. ಮೋಹನ್, ಬಂಟ್ವಾಳ ವಾಲಿಬಾಲ್ ಎಸೋಸಿಯೇಶನ್ ಅಧ್ಯಕ್ಷ  ಸುಪ್ರೀತ್ ಆಳ್ವ, ಅಲೆತ್ತೂರು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ, ಆನಂದ ಪೂಜಾರಿ ಕೈಕುಂಜೆ, ಪರಮೇಶ್ವರ ಶೆಟ್ಟಿ ಚಾವಡಿ ಮನೆ, ಅಲೆತ್ತೂರು, ದಾಮೋದರ್ ಮುಗ್ರೋಡಿ ಕನ್ಟಕ್ಷನ್ ಮಂಗಳೂರು, ನಿವೃತ್ತ ರೈಲ್ವೇ ಸ್ಟೇಶನ್ ಮಾಸ್ಟರ್ ರವಿಶಂಕರ್ ಕೈಕುಂಜೆ ಮೊದಲಾದವರು ಭಾಗವಹಿಸುವರು.

ಪಿಂಗಾರ  ಕಲಾವಿದೆರ್ ಬೆದ್ರ ತಂಡದಿಂದ ಕದಂಬ ಕುತೂಹಲ ಭರಿತ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಿತಿನ್ ಪೂಜಾರಿ, ಉಪಾಧ್ಯಕ್ಷ ದಿನೇಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್, ಜತೆ ಕಾರ್ಯದರ್ಶಿ ಪವನ್ ಕುಲಾಲ್, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಕ್ಷಯ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 24 ರಂದು (ನಾಳೆ) ಬಿ ಸಿ ರೋಡಿನ ಅಲೆತ್ತೂರಿನಲ್ಲಿ 25ನೇ ವರ್ಷದ ಶನೈಶ್ಚರ ಪೂಜೆ, 42ನೇ ವರ್ಷದ ವಾರ್ಷಿಕೋತ್ಸವ Rating: 5 Reviewed By: lk
Scroll to Top