ಅಣ್ಣಳಿಕೆ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಆಸ್ಪತ್ರೆಗೆ - Karavali Times ಅಣ್ಣಳಿಕೆ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಆಸ್ಪತ್ರೆಗೆ - Karavali Times

728x90

14 March 2024

ಅಣ್ಣಳಿಕೆ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಆಸ್ಪತ್ರೆಗೆ

ಬಂಟ್ವಾಳ, ಮಾರ್ಚ್ 14, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ  ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೊಯ್ಲ ಗ್ರಾಮದ ಅಣ್ಣಳಿಕೆ ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಗಾಯಾಳು ಬೈಕ್ ಸವಾರನನ್ನು  ಪಿಲಿಮೊಗರು ಟಿiವಾಸಿ ಸುರೇಶ್ ಎಂದು ಹೆಸರಿಸಲಾಗಿದೆ. ಸುರೇಶ್ ಅವರು ಬೈಕಿನಲ್ಲಿ ತನ್ನ ಸ್ನೇಹಿತ ಪುಷ್ಪೇಂದ್ರ ಸಿಂಗ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಅಣ್ಣಳಿಕೆ ಎಂಬಲ್ಲಿ ಉಮೇಶ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಸುರೇಶ್ ಅವರು ಗಾಯಗೊಂಡಿದ್ದು ಅವರನ್ನು ತಕ್ಷಣ ಸ್ಥಳೀಯರು ಮಂಗಳೂರು-ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಹಸವಾರ ಪುಷ್ಪೇಂದ್ರ ಸಿಂಗ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಾರು ಚಾಲಕನ ಟಿiರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಗಾಯಾಳು ಸುರೇಶ್ ಅವರ ಸಹೋದರ ರಾಘವೇಂದ್ರ ಪ್ರಭು ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಣ್ಣಳಿಕೆ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಆಸ್ಪತ್ರೆಗೆ Rating: 5 Reviewed By: karavali Times
Scroll to Top