ಬೇಂಕ್ಯ : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಪಲ್ಟಿ, ಚಾಲಕ ಸಹಿತ ಇಬ್ಬರಿಗೆ ಗಾಯ - Karavali Times ಬೇಂಕ್ಯ : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಪಲ್ಟಿ, ಚಾಲಕ ಸಹಿತ ಇಬ್ಬರಿಗೆ ಗಾಯ - Karavali Times

728x90

5 March 2024

ಬೇಂಕ್ಯ : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಪಲ್ಟಿ, ಚಾಲಕ ಸಹಿತ ಇಬ್ಬರಿಗೆ ಗಾಯ

 ಬಂಟ್ವಾಳ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಹಾಗೂ ಮಹಿಳಾ ಪ್ರಯಾಣಿಕೆ ಗಾಯಗೊಂಡ ಘಟನೆ ಸಜಿಪಮೂಡ ಗ್ರಾಮದ ಬೇಂಕ್ಯೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಸಂಭವಿಸಿದೆ. 

ಗಾಯಗೊಂಡ ಅಟೋ ರಿಕ್ಷಾ ಚಾಲಕನನ್ನು ಅಬ್ಬಾಸ್ ಹಾಗೂ ಮಹಿಳಾ ಪ್ರಯಾಣಿಕರನ್ನು ಜುಬೈದಾ ಎಂದು ಹೆಸರಿಸಲಾಗಿದೆ. ಸಮೀರ್ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಹಾಗೂ ಪ್ರಯಾಣಿಕೆ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೋಳಿಯಾರು ನಿವಾಸಿ ಅಬ್ದುಲ್ ಖಾದರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬೇಂಕ್ಯ : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಪಲ್ಟಿ, ಚಾಲಕ ಸಹಿತ ಇಬ್ಬರಿಗೆ ಗಾಯ Rating: 5 Reviewed By: karavali Times
Scroll to Top