ಕಬಕ : ಅಕ್ರಮ ಜಾನುವಾರು ಸಾಗಾಟದ ಕಾರು ಅಪಘಾತ, ಆರೋಪಿಗಳು ಪರಾರಿ - Karavali Times ಕಬಕ : ಅಕ್ರಮ ಜಾನುವಾರು ಸಾಗಾಟದ ಕಾರು ಅಪಘಾತ, ಆರೋಪಿಗಳು ಪರಾರಿ - Karavali Times

728x90

25 March 2024

ಕಬಕ : ಅಕ್ರಮ ಜಾನುವಾರು ಸಾಗಾಟದ ಕಾರು ಅಪಘಾತ, ಆರೋಪಿಗಳು ಪರಾರಿ

ಪುತ್ತೂರು, ಮಾರ್ಚ್ 25, 2024 (ಕರಾವಳಿ ಟೈಮ್ಸ್) : ಅಕ್ರಮ ಹಾಗೂ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಶಿಫ್ಟ್ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಕಬಕ ಗ್ರಾಮದ ಪದ್ನಡ್ಕ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಕೆಎ19 ಇಎಚ್8518 ನೋಂದಣಿ ಸಂಖ್ಯೆಯ ಸಿಲ್ವರ್ ಕಲರ್ ಶಿಪ್ಟ್ ಕಾರು ರಸ್ತೆಯ ತೀರ ಎಡ ಬದಿಗೆ ಬಂದು ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು, ಕಾರಿನಲ್ಲಿ 4 ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುತ್ತೂರು ನಗರ ಠಾಣಾ ಪಿಎಸ್ಸೈ ನಂದಕುಮಾರ್ ಎಂ ಎಂ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಿನ ಒಳಗಡೆ 4 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಿ ತುಂಬಿಸಿರುವುದು ಕಂಡು ಬಂದಿದೆ. ಅಪಘಾತದ ಬಳಿಕ ಆರೋಪಿಗಳು ಕಾರು ಹಾಗೂ ಜಾನುವಾರುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. 

ಕಾರು ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿರುವ ಪುತ್ತೂರು ನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಬಕ : ಅಕ್ರಮ ಜಾನುವಾರು ಸಾಗಾಟದ ಕಾರು ಅಪಘಾತ, ಆರೋಪಿಗಳು ಪರಾರಿ Rating: 5 Reviewed By: karavali Times
Scroll to Top