ಗೋಳ್ತಮಜಲು : ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಓರ್ವಗೆ ಗಾಯ - Karavali Times ಗೋಳ್ತಮಜಲು : ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಓರ್ವಗೆ ಗಾಯ - Karavali Times

728x90

29 March 2024

ಗೋಳ್ತಮಜಲು : ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಓರ್ವಗೆ ಗಾಯ

ಬಂಟ್ವಾಳ, ಮಾರ್ಚ್ 29, 2024 (ಕರಾವಳಿ ಟೈಮ್ಸ್) : ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಗುಂಡಿಗೆ ಬಿದ್ದು ಓರ್ವ ಗಾಯಗೊಂಡ ಘಟನೆ ಗೋಲ್ತಮಜಲು ಗ್ರಾಮದ ಜಮ್ಮು ಕ್ರಾಸ್ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. 

ಗಾಯಾಳು ಪ್ರಯಾಣಿಕನನ್ನು ಫಾಝಿಲ್ ಎಂದು ಹೆಸರಿಸಲಾಗಿದೆ. ಮುಹಮ್ಮದ್ ಫಾರೂಕ್ ಎಂಬವರು ಚಲಾಯಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಗುಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಕಾರು ಚಾಲಕ ಹಾಗೂ ಇನ್ನುಳಿದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಗಾಯಾಳು ಪ್ರಯಾಣಿಕನನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗೋಳ್ತಮಜಲು ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗೋಳ್ತಮಜಲು : ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಓರ್ವಗೆ ಗಾಯ Rating: 5 Reviewed By: karavali Times
Scroll to Top