ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಣೆ - Karavali Times ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಣೆ - Karavali Times

728x90

28 March 2024

ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಣೆ

ಬಂಟ್ವಾಳ, ಮಾರ್ಚ್ 28, 2024 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಝೋನ್ ಆಶ್ರಯದಲ್ಲಿ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಹೆದ್ದಾರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಂಝಾನ್ ತಿಂಗಳು ಪೂರ್ತಿ ಆಯೋಜಿಸಲಾಗುತ್ತಿರುವ ಹೈವೇ ಇಫ್ತಾರ್ ಟೆಂಟ್ ಕಾರ್ಯಕ್ರಮದಲ್ಲಿ ರಂಝಾನಿನ 17ನೇ ದಿನವಾಗಿರುವ ಗುರುವಾರ ಸಂಜೆ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಿಸಲಾಯಿತು. 

ಈ ಸಂದರ್ಭ ಶಾಖಾಧ್ಯಕ್ಷ ಇಸ್ಹಾಕ್ ಫೇಶನ್ ವೇರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫೀಕ್ ಆಲಡ್ಕ, ಕೋಶಾಧಿಕಾರಿ ಮುಹಮ್ಮದ್ ಹನೀಫ್ ಹಾಸ್ಕೋ, ಪದಾಧಿಕಾರಿಗಳಾದ ಸಲಾಂ ಕುಕ್ಕಾಜೆ, ಮಜೀದ್ ಬೋಗೋಡಿ, ಝುಬೈರ್ ಯು, ಶಾಫಿ ಹಾಜಿ, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ರಫೀಕ್ ಇನೋಳಿ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಪ್ರಧಾನ ಕಾರ್ಯದರ್ಶಿ ಟಿ ಎಂ ಹನೀಫ್ ಮುಸ್ಲಿಯಾರ್, ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಬಶೀರ್ ಇಸ್ಮಾಯಿಲ್ ನಂದಾವರ, ವಿಖಾಯ ಚೆಯರ್‍ಮೆನ್ ರಶೀದ್ ಅಗ್ರಹಾರ, ವಿಖಾಯ ಕನ್ವೀನರ್ ಮುಸ್ತಫಾ ಕಟ್ಟದಪಡ್ಪು, ವಲಯ ಜೊತೆ ಕಾರ್ಯದರ್ಶಿ ಸವಾದ್ ಗೂಡಿನಬಳಿ,  ಇರ್ಶಾದ್ ಡ್ರೀಮ್ಸ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಣೆ Rating: 5 Reviewed By: karavali Times
Scroll to Top