ಬಂಟ್ವಾಳ : ವೈನ್ ಶಾಪ್ ಹಿಂಬದಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವು - Karavali Times ಬಂಟ್ವಾಳ : ವೈನ್ ಶಾಪ್ ಹಿಂಬದಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವು - Karavali Times

728x90

19 March 2024

ಬಂಟ್ವಾಳ : ವೈನ್ ಶಾಪ್ ಹಿಂಬದಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವು

ಬಂಟ್ವಾಳ, ಮಾರ್ಚ್ 19, 2024 (ಕರಾವಳಿ ಟೈಮ್ಸ್) : ಇಲ್ಲಿನ ವೈನ್ ಶಾಪ್ ಹಿಂಬದಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನರಿಕೊಂಬು ಗ್ರಾಮದ ನಿವಾಸಿ ರಮೇಶ್ ಎಂಬವರು ತನ್ನ ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ ಕೆಎ 19 ಇವಿ 0620ಯ ಹೋಂಡಾ ಆಕ್ಟಿವಾ  ದ್ವಿಚಕ್ರ ವಾಹನವನ್ನು ಸೋಮವಾರ  ಮದ್ಯಾಹ್ನ ಬಂಟ್ವಾಳ ಕಾರ್ತಿಕ್ ವೈನ್ಸ್ ಶಾಪ್ ಹಿಂಬದಿಯಲ್ಲಿ ನಿಲ್ಲಿಸಿ ಹೋಗಿದ್ದು, ಸಂಜೆ ಹಿಂತಿರುಗಿ ಬಂದು ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ.  ಕಳವಾದ ದ್ವಿಚಕ್ರ ವಾಹನದ ಮೌಲ್ಯ 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ವೈನ್ ಶಾಪ್ ಹಿಂಬದಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವು Rating: 5 Reviewed By: karavali Times
Scroll to Top