ಬೇಂಕೆ : ಬೈಕುಗಳ ಮಧ್ಯೆ ಅಪಘಾತದಿಂದ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು - Karavali Times ಬೇಂಕೆ : ಬೈಕುಗಳ ಮಧ್ಯೆ ಅಪಘಾತದಿಂದ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು - Karavali Times

728x90

18 March 2024

ಬೇಂಕೆ : ಬೈಕುಗಳ ಮಧ್ಯೆ ಅಪಘಾತದಿಂದ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಬಂಟ್ವಾಳ, ಮಾರ್ಚ್ 18, 2024 (ಕರಾವಳಿ ಟೈಮ್ಸ್) : ಬೈಕುಗಳೆರಡರ ಮಧ್ಯೆ ಅಪಘಾತ ಸಂಭವಿಸಿ ಮೂರು ಮಂದಿ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಜಿಪಮೂಡ ಗ್ರಾಮದ ಬೇಂಕೆ ಎಂಬಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. 

ಗಾಯಾಳುಗಳನ್ನು ಬೈಕ್ ಸವಾರ ಜಲಾಲುದ್ದೀನ್, ಸಹಸವಾರ ಅಬ್ದುಲ್ ಸಲಾಂ ಹಾಗೂ ಇನ್ನೊಂದು ಬೈಕ್ ಸವಾರ ಸತ್ತಿವೇಲು ಎಂದು ಹೆಸರಿಸಲಾಗಿದೆ. ನರಿಂಗಾನ ನಿವಾಸಿ ಅಬ್ದುಲ್ ಸಲಾಂ ಹಾಗೂ ಜಲಾಲುದ್ದೀನ್ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಸಜಿಪಮೂಡ ಗ್ರಾಮದ ಬೇಂಕೆ ಎಂಬಲ್ಲಿ ಸತ್ತಿವೇಲು ಅವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಎರಡೂ ಬೈಕ್ ಸವಾರರು ಕೂಡಾ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೇಂಕೆ : ಬೈಕುಗಳ ಮಧ್ಯೆ ಅಪಘಾತದಿಂದ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು Rating: 5 Reviewed By: karavali Times
Scroll to Top