ಮೊಟ್ಟೆತ್ತಡ್ಕ : ನಡೆದುಕೊಂಡು ಹೋಗುತ್ತಿದ್ದ ತಂದೆ-ಮಗನಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ, ಜೀವಬೆದರಿಕೆ - Karavali Times ಮೊಟ್ಟೆತ್ತಡ್ಕ : ನಡೆದುಕೊಂಡು ಹೋಗುತ್ತಿದ್ದ ತಂದೆ-ಮಗನಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ, ಜೀವಬೆದರಿಕೆ - Karavali Times

728x90

29 March 2024

ಮೊಟ್ಟೆತ್ತಡ್ಕ : ನಡೆದುಕೊಂಡು ಹೋಗುತ್ತಿದ್ದ ತಂದೆ-ಮಗನಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ, ಜೀವಬೆದರಿಕೆ

ಪುತ್ತೂರು, ಮಾರ್ಚ್ 29, 2024 (ಕರಾವಳಿ ಟೈಮ್ಸ್) : ರಸ್ತೆಯಲ್ಲಿ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದ ತಂದೆ-ಮಗನಿಗೆ ಕಾರಿನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. 

ಹಲ್ಲೆಗೊಳಗಾದ ತಂದೆ-ಮಗನನ್ನು ಕೆಮ್ಮಿಂಜೆ ನಿವಾಸಿ ಜುಬೇರ್ (30) ಹಾಗೂ ಅವರ ತಂದೆ ಆದಂ ಎಂದು ಹೆಸರಿಸಲಾಗಿದೆ. ಇವರು ಗುರುವಾರ ರಾತ್ರಿ ಮೊಟ್ಟೆತ್ತಡ್ಕ ಎಂಬಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಆರೋಪಿಗಳಾದ ತಿಂಗಳಾಡಿ ನಿವಾಸಿ ಸಿದ್ದೀಕ್ ಅನ್ಸಾರ್ ಹಾಗೂ ಕೆಮ್ಮಿಂಜೆ ನಿವಾಸಿ ಶಮೀರ್ ಎಂಬವರು ತಂದೆ-ಮಗನನ್ನು ಅಡ್ಡಗಟ್ಟಿ ಅವಾಚ್ಯವಾಗಿ ಬೈದಿದ್ದಲ್ಲದೆ ಬಳಿಕ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಪುತ್ತೂರು ನಗರ  ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2024 ಕಲಂ 341, 504, 323, 324, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೊಟ್ಟೆತ್ತಡ್ಕ : ನಡೆದುಕೊಂಡು ಹೋಗುತ್ತಿದ್ದ ತಂದೆ-ಮಗನಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ, ಜೀವಬೆದರಿಕೆ Rating: 5 Reviewed By: karavali Times
Scroll to Top