ಫರಂಗಿಪೇಟೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಆಸ್ಪತ್ರೆಗೆ - Karavali Times ಫರಂಗಿಪೇಟೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಆಸ್ಪತ್ರೆಗೆ - Karavali Times

728x90

5 April 2024

ಫರಂಗಿಪೇಟೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಆಸ್ಪತ್ರೆಗೆ

ಬಂಟ್ವಾಳ, ಎಪ್ರಿಲ್ 05, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. 

ಗಾಯಾಳುಗಳನ್ನು ಅಡ್ಯಾರು ನಿವಾಸಿ ಅಬ್ದುಲ್ ಹಮೀದ್ ಶೋಹೇಬ್ (22) ಹಾಗೂ ಅವರ ಚಿಕ್ಕಿಮ್ಮನ ಮಗಳು ಫಾತಿಮಾ ಎಂದು ಹೆಸರಿಸಲಾಗಿದೆ. ಶೋಹೇಬ್ ಅವರು ಫಾತಿಮಾ ಅವರನ್ನು ಕುಳ್ಳಿರಿಸಿಕೊಂಡು ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಮಂಗಳೂರು ಕಡೆಗೆ ಹೋಗುವ ಏಕಪಥ ರಸ್ತೆಯಲ್ಲಿ ಮುಹಮ್ಮದ್ ಶಫೀಕ್ ಅವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಸ್ಕೂಟರ್ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಆಸ್ಪತ್ರೆಗೆ Rating: 5 Reviewed By: karavali Times
Scroll to Top