ಬಂಟ್ವಾಳ, ಎಪ್ರಿಲ್ 16, 2024 (ಕರಾವಳಿ ಟೈಮ್ಸ್) : ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಹಿರಿಯ ಕಾರ್ಯಕರ್ತ ಎಂ ಎಚ್ ಶಾಹುಲ್ ಹಮೀದ್ (90) ಅವರು ಮಂಗಳವಾರ (ಎಪ್ರಿಲ್ 16) ಮಧ್ಯಾಹ್ನ ಪಾಣೆಮಂಗಳೂರು ಸಮೀಪದ ಬೋಳಂಗಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಮೂಲರಪಟ್ಣ ನಿವಾಸಿಯಾಗಿದ್ದ ಇವರು, ಹಲವು ವರ್ಷಗಳ ಹಿಂದೆ ಬೋಳಂಗಡಿಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಆರಂಭಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಸ್ಥಾಪಕ ಸದಸ್ಯ ಹಾಗೂ ತಮ್ಮ ಮಾವ (ಪತ್ನಿಯ ತಂದೆ) ಮರ್ಹೂಮ್ ಚೆಂಡಾಡಿ ಮುಹಮ್ಮದ್ ಅವರ ಪ್ರಭಾವಕ್ಕೊಳಗಾಗಿ, ಸಂಘಟನಾತ್ಮಕ ಕೆಲಸಗಳಲ್ಲೂ ಕೂಡ ಗುರುತಿಸಿಕೊಂಡಿದ್ದರು.
ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಅಭಿವೃದ್ಧಿಗಾಗಿ ದುಡಿದವರು. ಸ್ಥಳೀಯವಾಗಿ ಎಲ್ಲ ಧರ್ಮೀಯರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ಇವರು ‘ಸಾವುಂಞõÁಕ’ ಎಂದೇ ಚಿರಪರಿಚಿತರು.
ಮೃತರು ಪತ್ನಿ ಫಾತಿಮಾ ಚೆಂಡಾಡಿ, ಪುತ್ರರಾದ ಅಬ್ದುಶ್ಶೂಕೂರ್, ಸಾಮಾಜಿಕ ಕಾರ್ಯಕರ್ತ ಎಂ ಎಚ್ ಮುಸ್ತಫಾ, ಆರು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಬೋಳಂಗಡಿಯ ಹವ್ವಾ ಜುಮಾ ಮಸೀದಿಯಲ್ಲಿ ಮಂಗಳವಾರ ರಾತ್ರಿ 9.30ರ ವೇಳೆಗೆ ನೆರವೇರಿದೆ.
ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಸಯ್ಯಿದ್ ಯಹ್ಯಾ ತಂóಙಳ್, ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಹಲವು ಮಂದಿ ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ತೀವ್ರ ಸಂತಾಪ ಸೂಚಿಸಿದ್ದಾರೆ.
0 comments:
Post a Comment