ಉಚ್ಚಿಲ : ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ - Karavali Times ಉಚ್ಚಿಲ : ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ - Karavali Times

728x90

23 April 2024

ಉಚ್ಚಿಲ : ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

ಮಂಗಳೂರು, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ಲತೀಫ್ ಗುರುಪುರ ನೇತೃತ್ವದ ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉಚ್ಚಿಲ-ಸೋಮೇಶ್ವರ ಕಿಯಂಝಾ ಗಾರ್ಡನಿನಲ್ಲಿ ಇತ್ತೀಚಿಗೆ ನಡೆಯಿತು.  

ಪಾಣಕ್ಕಾಡ್ ಸಯ್ಯಿದ್ ಸ್ವಾಬಿಕಲಿ ಶಿಹಾಬ್ ತಂಙಳ್ ದುಆ ನೆರವೇರಿಸಿದರು. ಸಯ್ಯಿದ್ ಜಿಫ್ರಿ ತಂಗಳ್ ಬೆಳ್ತಂಗಡಿ ಉದ್ಘಾಟಿಸಿದರು. ಸಯ್ಯಿದ್ ಅಲೀ ತಂಙಳ್ ಕುಂಬೋಳ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದ್ದರು. ಸಯ್ಯಿದ್ ಜಮಲುಲ್ಲೈಲಿ ತಂಙಳ್ ಕಾಜೂರು ಲೋಗೋ ಅನಾವರಣಗೊಳಿಸಿದರು. 

ಬಿ ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ ತೋಡಾರ್, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಫಿರೋಝ್ ಕುನ್ನುಪರಂಬಿಲ್, ಬದ್ರುದ್ದೀನ್ ಅಝ್ಹರಿ, ಹುಸೈನ್ ದಾರಿಮಿ, ಎಸ್ ಬಿ ದಾರಿಮಿ, ಅನೀಸ್ ಕೌಸರಿ, ರಫೀಕ್ ಮಾಸ್ಟರ್, ಝಕಾರಿಯ ಮೂಡುಶೆಡ್ಡೆ, ಬಶೀರ್, ಖಲೀಲ್ ವಗ್ಗ, ನೌಶಾದ್ ಇನೋಳಿ ಮೊದಲಾದವರು ಭಾಗವಹಿಸಿದ್ದರು. 

ಜಮಾಲುದ್ದೀನ್ ದಾರಿಮಿ ಕುತುಬಾ ಪಾರಾಯಣ ನೆರವೇರಿಸಿದರು. ಸಂಘಟಕರಾದ ಇಮ್ರಾನ್ ಅಡ್ಡೂರು ಸ್ವಾಗತಿಸಿ, ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಉಚ್ಚಿಲ : ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ Rating: 5 Reviewed By: karavali Times
Scroll to Top