ಬಂಟ್ವಾಳ ನಗರ ಪೊಲೀಸರ ರಾತ್ರಿ ಕಾರ್ಯಾಚರಣೆ : ಖೋಟಾ ನೋಟು ಚಲಾವಣೆಗೆ ಬಂದಿದ್ದ ಮಹಿಳೆ ಸಹಿತ ಇಬ್ಬರು ಕೇರಳಿಗರು ಬಿ.ಸಿ.ರೋಡಿನಲ್ಲಿ ಪೊಲೀಸ್ ಬಲೆಗೆ, ಓರ್ವ ಪರಾರಿ - Karavali Times ಬಂಟ್ವಾಳ ನಗರ ಪೊಲೀಸರ ರಾತ್ರಿ ಕಾರ್ಯಾಚರಣೆ : ಖೋಟಾ ನೋಟು ಚಲಾವಣೆಗೆ ಬಂದಿದ್ದ ಮಹಿಳೆ ಸಹಿತ ಇಬ್ಬರು ಕೇರಳಿಗರು ಬಿ.ಸಿ.ರೋಡಿನಲ್ಲಿ ಪೊಲೀಸ್ ಬಲೆಗೆ, ಓರ್ವ ಪರಾರಿ - Karavali Times

728x90

11 May 2024

ಬಂಟ್ವಾಳ ನಗರ ಪೊಲೀಸರ ರಾತ್ರಿ ಕಾರ್ಯಾಚರಣೆ : ಖೋಟಾ ನೋಟು ಚಲಾವಣೆಗೆ ಬಂದಿದ್ದ ಮಹಿಳೆ ಸಹಿತ ಇಬ್ಬರು ಕೇರಳಿಗರು ಬಿ.ಸಿ.ರೋಡಿನಲ್ಲಿ ಪೊಲೀಸ್ ಬಲೆಗೆ, ಓರ್ವ ಪರಾರಿ

ಬಂಟ್ವಾಳ, ಮೇ 11, 2024 (ಕರಾವಳಿ ಟೈಮ್ಸ್) : ಖೋಟಾ ನೋಟು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಮಹಿಳೆ ಸಹಿತ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಿ ಸಿ ರೋಡಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದು, ಓರ್ವ ಓಡಿ ಪರಾರಿಯಾಗಿದ್ದಾನೆ. 

ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ತಾಲೂಕು, ಕೂಡ್ಲು ಗ್ರಾಮದ ಚೂರಿ ಎಂಬಲ್ಲಿನ ಜುಮಾ ಮಸೀದಿ ಬಳಿ ವಿಶಾಲ್ ಮಂಝಿಲ್ ನಿವಾಸಿ ಮೊಹಮ್ಮದ್ ಸಿ ಎ (61), ಉಬೈದಾ ಮಂಝಿಲ್ ನಿವಾಸಿ ಕಮರುನ್ನೀಸಾ (41) ಹಾಗೂ ಪರಾರಿಯಾದವನನ್ನು  ಶರೀಫ್ ಎಂದು ಹೆಸರಿಸಲಾಗಿದೆ. 

ಶುಕ್ರವಾರ ರಾತ್ರಿ ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೆ ಎಲ್14 ಟಿ777 ನೋಂದಣಿ ಸಂಖ್ಯೆಯ ಕಾರನ್ನು ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಪರಿಶೀಲಿಸಲು ತೆರಳಿದಾಗ ಕಾರಿನ ಚಾಲಕ ಸೀಟಿನಲ್ಲಿದ್ದಾತ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದಾರೆ. ಕಾರಿನಲ್ಲಿ ಮಹಿಳೆಯು ಪತ್ತೆಯಾಗಿರುತ್ತಾಳೆ. ಪರಾರಿಯಾಗುತ್ತಿದ್ದವರ ಪೈಕಿ ಮೊಹಮ್ಮದ್ ಸಿ ಎ ಹಾಗೂ ಕಮರುನ್ನಿಸಾ ಎಂಬವರನ್ನು ಪೊಲೀಸರು ಹಿಡಿದಿದ್ದಾರೆ. 

ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ಬಳಿಯಲ್ಲಿದ್ದ 500 ರ ಮುಖ ಬೆಲೆಯ 46  ಖೋಟಾ ನೋಟುಗಳು, 5,300/- ರೂಪಾಯಿ ನಗದು ಹಣ, 3 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ನಗರ ಪೊಲೀಸರ ರಾತ್ರಿ ಕಾರ್ಯಾಚರಣೆ : ಖೋಟಾ ನೋಟು ಚಲಾವಣೆಗೆ ಬಂದಿದ್ದ ಮಹಿಳೆ ಸಹಿತ ಇಬ್ಬರು ಕೇರಳಿಗರು ಬಿ.ಸಿ.ರೋಡಿನಲ್ಲಿ ಪೊಲೀಸ್ ಬಲೆಗೆ, ಓರ್ವ ಪರಾರಿ Rating: 5 Reviewed By: karavali Times
Scroll to Top