ಮೇ 20 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ - Karavali Times ಮೇ 20 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ - Karavali Times

728x90

14 May 2024

ಮೇ 20 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್

ಪುತ್ತೂರು, ಮೇ 15, 2024 (ಕರಾವಳಿ ಟೈಮ್ಸ್) : ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಮೇ 20 ರಂದು ಪೂರ್ವಾಹ್ನ 11.30ಕ್ಕೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ  ನಡೆಯಲಿದೆ.

ಈ ಅದಾಲತ್ತಿನಲ್ಲಿ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ  ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು ತಕರಾರುಗಳನ್ನು ಪರಶೀಲಿಸಲಾಗುವುದು.

ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮುಖೇನ, ಅಂಚೆ ಅದಾಲತ್  ತಲೆಬರಹದಡಿ ಮೇ 20ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574201 ವಿಳಾಸಕ್ಕೆ  ಕಳುಹಿಸಬಹುದು. ಅಥವಾ ಅದೇ ದಿನ ಬೆಳಿಗ್ಗೆ 11.30ಕ್ಕೆ ಮುಂಚಿತವಾಗಿ ದೂರವಾಣಿ ಸಂಖ್ಯೆ 08251-230201, 230295ಕ್ಕೆ ನೇರವಾಗಿಯೂ ಸಂಪರ್ಕಿಸಬಹುದು. ತಮ್ಮ ದೂರುಗಳನ್ನು ಇಮೇಲ್ doputtur.ka@indiapost.gov.in ಮೂಲಕವೂ ಅದಾಲತ್ತಿಗೆ ಮೊದಲು ತಲುಪುವಂತೆ  ಕಳುಹಿಸಬಹುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೇ 20 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ Rating: 5 Reviewed By: karavali Times
Scroll to Top