ರಾಜ್ಯ ವಿಧಾನಪರಿಷತ್ತಿನ ತೆರವಾಗಲಿರುವ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ : ಜೂನ್ 13 ರಂದು ಮತದಾನ - Karavali Times ರಾಜ್ಯ ವಿಧಾನಪರಿಷತ್ತಿನ ತೆರವಾಗಲಿರುವ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ : ಜೂನ್ 13 ರಂದು ಮತದಾನ - Karavali Times

728x90

20 May 2024

ರಾಜ್ಯ ವಿಧಾನಪರಿಷತ್ತಿನ ತೆರವಾಗಲಿರುವ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ : ಜೂನ್ 13 ರಂದು ಮತದಾನ

ಬೆಂಗಳೂರು, ಮೇ 20, 2024 (ಕರಾವಳಿ ಟೈಮ್ಸ್) : ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಮತದಾನ ದಿನಾಂಕ ಘೋಷಿಸಿದೆ. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿರುವ 11 ಸದಸ್ಯರ ಅವಧಿ ಜೂನ್ 17ಕ್ಕೆ ಕೊನೆಗೊಳ್ಳಲಿದ್ದು, ನೂತನ ಸದಸ್ಯರ ಆಯ್ಕೆಗೆ ಜೂನ್ 13 ರಂದು ಮತದಾನ ನಡೆಯಲಿದೆ. 

ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನ. ಜೂನ್ 4 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂನ್ 13 ರಂದು ಮತದಾನ ನಡೆಯಲಿದೆ. ಅದೇ ದಿನ ಸಂಜೆ ಐದು ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ತೇಜಸ್ವಿನಿಗೌಡ, ಪಿ ಎಂ ಮುನಿರಾಜುಗೌಡ, ಕೆ ಪಿ ನಂಜುಂಡಿ, ಬಿ ಎಂ ಫಾರೂಕ್, ಅರವಿಂದ ಕುಮಾರ್ ಅರಳಿ, ಎನ್ ಎಸ್ ಬೋಸರಾಜು, ಗೋವಿಂದರಾಜು, ರಘುನಾಥ ರಾವ್ ಮಲ್ಕಾಪುರೆ, ಎನ್ ರವಿಕುಮಾರ್, ಎಸ್ ರುದ್ರೇಗೌಡ, ಕೆ ಹರೀಶ್ ಕುಮಾರ್ ಅವರ ಅವಧಿ ಜೂನ್ 17ಕ್ಕೆ ಅಂತ್ಯವಾಗಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯ ವಿಧಾನಪರಿಷತ್ತಿನ ತೆರವಾಗಲಿರುವ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ : ಜೂನ್ 13 ರಂದು ಮತದಾನ Rating: 5 Reviewed By: karavali Times
Scroll to Top