ಬಂಟ್ವಾಳ : ವಾಟ್ಸಪ್ ಕರೆ ಚಾಲ್ತಿಯಲ್ಲಿರುತ್ತಲೇ ವ್ಯಕ್ತಿಯ ಬ್ಯಾಂಕ್ ಮಾಹಿತಿ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡ ವಂಚಕರು - Karavali Times ಬಂಟ್ವಾಳ : ವಾಟ್ಸಪ್ ಕರೆ ಚಾಲ್ತಿಯಲ್ಲಿರುತ್ತಲೇ ವ್ಯಕ್ತಿಯ ಬ್ಯಾಂಕ್ ಮಾಹಿತಿ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡ ವಂಚಕರು - Karavali Times

728x90

19 May 2025

ಬಂಟ್ವಾಳ : ವಾಟ್ಸಪ್ ಕರೆ ಚಾಲ್ತಿಯಲ್ಲಿರುತ್ತಲೇ ವ್ಯಕ್ತಿಯ ಬ್ಯಾಂಕ್ ಮಾಹಿತಿ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡ ವಂಚಕರು

ಬಂಟ್ವಾಳ, ಮೇ 19, 2025 (ಕರಾವಳಿ ಟೈಮ್ಸ್) : ಆನ್ ಲೈನ್ ಮನೆ ಸಾಮಾಗ್ರಿ ಖರೀದಿಸುವ ಬಗ್ಗೆ ವಾಟ್ಸಪ್ ಕರೆ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕುರಿಯಾಳ ಗ್ರಾಮದ ಮೇಲ್ಕೋಡಿ ನಿವಾಸಿ ಹೆನ್ರಿ ಕ್ರಾಸ್ತಾ ಎಂಬವರೇ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ವಂಚನೆಗೊಳಗಾದವರು. ಇವರಿಗೆ ಬ್ಯಾಂಕ್ ಆಫ್ ಬರೋಡಾ ಬಿ ಸಿ ರೋಡ್ ಶಾಖೆ, ಎಚ್ ಡಿ ಎಫ್ ಸಿ ಬ್ಯಾಂಕ್ ಬಂಟ್ವಾಳ ಶಾಖೆಯಲ್ಲಿ ಖಾತೆಗಳಿದ್ದು, ಹಾಗೂ ಎಸ್ ಬಿ ಐ ಬ್ಯಾಂಕ್, ಬಿ ಸಿ ರೋಡ್ ಶಾಖೆಯಲ್ಲಿ ಪತ್ನಿ ಪ್ಲೇವಿಯ ಎಲ್ಸಿ ಕ್ರಾಸ್ತ ಅವರ ಜೊತೆ ಜಂಟಿ ಖಾತೆ ಹಾಗೂ ಪುತ್ರ ಅಮೀತ್ ಕ್ರಾಸ್ತಾ ಅವರ ಹೆಸರಿನಲ್ಲಿ ಜಂಟಿ ಖಾತೆಗಳಿವೆ. 

ಮೇ 10 ರಂದು ಬೆಳಿಗ್ಗೆ 7 ಗಂಟೆಗೆ ಹೆನ್ರಿ ಕ್ರಾಸ್ತಾ ಅವರು ಮೊಬೈಲ್ ನಲ್ಲಿ ಫೇಸ್ ಬುಕ್ ನೋಡಿಕೊಂಡಿರುವಾಗ ಬಂದ ಜಾಹೀರಾತೊಂದನ್ನು ನೋಡಿ ಮನೆಯ ಸ್ನಾನದ ಗೃಹದ ಪರಿಕರಗಳನ್ನು ಆನ್ ಲೈನ್ ನಲ್ಲಿ ಕೊಂಡುಕೊಳ್ಳಲು ಅದರಲ್ಲಿರುವ ವಾಟ್ಸಪ್ ಮೊಬೈಲ್ ಸಂಖ್ಯೆಗೆ ಹೆನ್ರಿ ಕ್ರಾಸ್ತಾ ಅವರು ವಾಟ್ಸಾಪ್ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ವಿಚಾರಿಸಿದ್ದು, ಈ ಸಂದರ್ಭ ವಂಚಕರು ವಾಟ್ಸಪ್ ಕರೆಯಲ್ಲಿ ಇರುವಂತೆ ತಿಳಿಸಿದ್ದಾರೆ. ಈ ವೇಳೆ ಕ್ರಾಸ್ತಾ ಅವರ ಮೊಬೈಲ್ ಮಾಹಿತಿಯನ್ನು ಯಾವುದೋ ವಿಧಾನದಿಂದ ಪಡೆದುಕೊಂಡು, ಬ್ಯಾಂಕ್ ಆಫ್ ಬರೋಡಾ, ಬಿ ಸಿ ರೋಡ್ ಖಾತೆಯಿಂದ 40 ಸಾವಿರ ರೂಪಾಯಿ, ಎಚ್ ಡಿ ಎಫ್ ಸಿ ಬ್ಯಾಂಕ್, ಬಂಟ್ವಾಳ ಶಾಖೆಯ ಖಾತೆಯಿಂದ 1.05 ಲಕ್ಷ ರೂಪಾಯಿ ಮತ್ತು ಎಸ್ ಬಿ ಐ ಬ್ಯಾಂಕ್, ಬಿ ಸಿ ರೋಡ್ ಶಾಖೆಯಲ್ಲಿರುವ 2 ಖಾತೆಗಳಿಂದ 2,29,700/- ಮತ್ತು 25 ಸಾವಿರ ರೂಪಾಯಿ ಸಹಿತ ಒಟ್ಟು, 2,54,700/- ರೂಪಾಯಿಗಳನ್ನು ಸಹಿತ ಎಲ್ಲಾ ಬ್ಯಾಂಕ್ ಖಾತೆಗಳಿಂದ ಒಟ್ಟು 3,99,700/- ರೂಪಾಯಿಗಳನ್ನು ಯಾವುದೋ ವಿಧಾನದ ಮೂಲಕ ಹಣವನ್ನು ಬ್ಯಾಂಕ್ ಖಾತೆಗಳಿಂದ ವರ್ಗಾವಣೆಗೊಳಿಸಿಕೊಂಡಿರುತ್ತಾರೆ. ಈ ಬಗ್ಗೆ ಅವರ ಪತ್ನಿ ಪ್ಲೇವಿಯ ಎಲ್ಸಿ ಕ್ರಾಸ್ತ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ವಾಟ್ಸಪ್ ಕರೆ ಚಾಲ್ತಿಯಲ್ಲಿರುತ್ತಲೇ ವ್ಯಕ್ತಿಯ ಬ್ಯಾಂಕ್ ಮಾಹಿತಿ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡ ವಂಚಕರು Rating: 5 Reviewed By: karavali Times
Scroll to Top