ಬಂಟ್ವಾಳ, ಮೇ 03, 2025 (ಕರಾವಳಿ ಟೈಮ್ಸ್) : ತಾಲೂಕಿನ ಪಾಟ್ರಕೋಡಿ ನಿವಾಸಿ, ಅಬ್ದುಲ್ ರಹಿಮಾನ್ ಬಾಯಬೆ ಅವರ ಪುತ್ರಿ, ಪುತ್ತೂರು ಸುದಾನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಆಯಿಷಾ ರಹ್ಮಾನ್ ಅವರು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 613 ಅಂಕಗಳನ್ನು ಪಡೆದು 98 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.
ಈಕೆಯ ಸಹೋದರಿ ಫಾತಿಮಾ ರಹ್ಮಾನ್ ಪ್ರಸ್ತುತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 585 ಅಂಕಗಳನ್ನು ಪಡೆದು 98 ಶೇಕಡಾ ಫಲಿತಾಂಶ ದಾಖಲಿಸಿದ್ದಳು ಎಂಬುದು ಗಮನಾರ್ಹ. ಇವರು ಪಾಟ್ರಕೋಡಿ ನಿವಾಸಿ ಅಬ್ದುಲ್ ರಹಿಮಾನ್ ಬಾಯಬೆ ಹಾಗೂ ರಝಿಯಾ ಸುಲ್ತಾನ್ ದಂಪತಿಯ ಪುತ್ರಿಯರಾಗಿದ್ದು, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಆದಂ ಕುಂಞÂ ಅವರ ಮೊಮ್ಮಕ್ಕಳು.
0 comments:
Post a Comment