ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ : ನರಿಕೊಂಬು ಹಿತೈಷಿ ಇನ್ಸ್ಟಿಟ್ಯೂಟ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ - Karavali Times ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ : ನರಿಕೊಂಬು ಹಿತೈಷಿ ಇನ್ಸ್ಟಿಟ್ಯೂಟ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ - Karavali Times

728x90

4 May 2025

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ : ನರಿಕೊಂಬು ಹಿತೈಷಿ ಇನ್ಸ್ಟಿಟ್ಯೂಟ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

 ಬಂಟ್ವಾಳ, ಮೇ 04, 2025 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಎಂಬಲ್ಲಿ ಮುಖ್ಯ ಕಚೇರಿ ಹಾಗೂ ಮೊಡಂಕಾಪಿನಲ್ಲಿ ಶಾಖಾ ಕಚೇರಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಹಿತೈಷಿ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. 

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸುಶಾಂತ್ ಪಿ ಸುವರ್ಣ (611), ಐಶ್ವರ್ಯ ಡಿ ಗೌಡ (609), ನೀಲ್ ಸೂರಜ್ (573), ಮನ್ವಿ (560), ರಾಹಿಲ್ (553), ಮೋನಿಷಾ (532) ಅಂಕಗಳನ್ನು ಪಡೆದು ಸಾಧನೆಗೈದರೆ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾರ್ತಿಕ್ (536), ರುಶಾಲಿ ಸುವರ್ಣ (532), ಸೃಷ್ಟಿ ನಾಟಿಕಾರ್ (527), ಸಮೀಕ್ಷಾ ಸುವರ್ಣ (519), ಮಾನ್ವಿತಾ ಪೈ (511) ಅಂಕಗಳನ್ನು ಪಡೆದು ಉತ್ತಮ ಸಾಧನೆಗೈದಿದ್ದಾರೆ.

ಸಂಸ್ಥೆಯಲ್ಲಿ 2025-26ನೇ ಸಾಲಿನ ಪ್ರವೇಶಾತಿಗಳು ಆರಂಭಗೊಂಡಿದ್ದು, 1 ರಿಂದ 9ನೇ ತರಗತಿ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ (ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ), ಸಿಇಟಿ, ನೀಟ್ ದಾಖಲಾತಿಗಳಿಗಾಗಿ ಸಂಸ್ಥೆಯ ಮುಖ್ಯ ಕಚೇರಿ : ಹಿತೈಷಿ ಇನ್ಸ್ಟಿಟ್ಯೂಟ್, ಲಕ್ಷ್ಮಿ ಪ್ರಿಂಟರ್ಸ್ ಬಿಲ್ಡಿಂಗ್, ನರಿಕೊಂಬು, ಪಾಣೆಮಂಗಳೂರು - 574231 ಅಥವಾ ಸಂಸ್ಥೆಯ ಶಾಖಾ ಕಚೇರಿ : ಹಿತೈಷಿ ಇನ್ಸ್ಟಿಟ್ಯೂಟ್, ಶಿವಗಣೇಶ್ ಕಾಂಪ್ಲೆಕ್ಸ್, ಕಾರ್ಮೆಲ್ ಕಾಲೇಜು ಹತ್ತಿರ, ಮೊಡಂಕಾಪು, ಬಿ ಸಿ ರೋಡು-574219 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ : ನರಿಕೊಂಬು ಹಿತೈಷಿ ಇನ್ಸ್ಟಿಟ್ಯೂಟ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ Rating: 5 Reviewed By: karavali Times
Scroll to Top