ಸಜಿಪನಡು : ಕಳವುಗೈದು ವಧೆ ಮಾಡಲು ತಂದು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ದನ ಪೊಲೀಸ್ ವಶಕ್ಕೆ - Karavali Times ಸಜಿಪನಡು : ಕಳವುಗೈದು ವಧೆ ಮಾಡಲು ತಂದು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ದನ ಪೊಲೀಸ್ ವಶಕ್ಕೆ - Karavali Times

728x90

7 June 2025

ಸಜಿಪನಡು : ಕಳವುಗೈದು ವಧೆ ಮಾಡಲು ತಂದು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ದನ ಪೊಲೀಸ್ ವಶಕ್ಕೆ

ಬಂಟ್ವಾಳ, ಜೂನ್ 07, 2025 (ಕರಾವಳಿ ಟೈಮ್ಸ್) : ದನ ಕಳವು ಮಾಡಿಕೊಂಡು ಬಂದು ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದನವನ್ನು ವಶಕ್ಕೆ ಪಡೆದುಕೊಂಡ ಘಟನೆ ಸಜಿಪನಡು ಗ್ರಾಮದ ಬೈಲುಗುತ್ತು ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. 

ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಲೋಲಾಕ್ಷ ಕೆ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ರಾಹಿಂ ಎಂಬಾತ ದನವೊಂದನ್ನು ಹಿಂಸತ್ಮಾಕವಾಗಿ ವಧೆ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪನಡು : ಕಳವುಗೈದು ವಧೆ ಮಾಡಲು ತಂದು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ದನ ಪೊಲೀಸ್ ವಶಕ್ಕೆ Rating: 5 Reviewed By: karavali Times
Scroll to Top