ಕ್ರೈಸ್ತ ದಫನ ಭೂಮಿಯ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - Karavali Times ಕ್ರೈಸ್ತ ದಫನ ಭೂಮಿಯ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - Karavali Times

728x90

25 June 2025

ಕ್ರೈಸ್ತ ದಫನ ಭೂಮಿಯ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಪುತ್ತೂರು, ಜೂನ್ 25, 2025 (ಕರಾವಳಿ ಟೈಮ್ಸ್) : ಕ್ರೈಸ್ತ ದಫನ ಭೂಮಿಯ ಸಮಾಧಿಯನ್ನು ದುಷ್ಕರ್ಮಿಗಳು ಒಡೆದು ಹಾಕಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಪುತ್ತೂರು ಆನೆಮಜಲು ಪರಿಸರದಲ್ಲಿ ಘಟನೆ ನಡೆದಿದ್ದು, ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ಫಾದರ್ ಬಾಲ್ತಿಜಾರ್ ಪಿಂಟೋ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಕ್ರೈಸ್ತ ದಫನ್ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿರುವ ಬಗ್ಗೆ ಜೂನ್ 14 ರಂದು ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, ದೂರರ್ಜಿ ದಾಖಲಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕ್ರೈಸ್ತ ದಫನ ಭೂಮಿಯ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top