ಬಂಟ್ವಾಳ, ಜೂನ್ 26, 2022 (ಕರಾವಳಿ ಟೈಮ್ಸ್) : ಸಜಿಪನಡು ಗ್ರಾಮದ ದೇರಾಜೆಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ವಾಟ್ಸಪ್ ಗ್ರೂಪಿನಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿದ ಇಬ್ಬರು ವ್ಯಕ್ತಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
“ವರ್ಕಾಡಿ ಟಾಪ್ ನ್ಯೂಸ್ ಗ್ರೂಪ್” ಎಂಬ ವಾಟ್ಸಪ್ ಗುಂಪಿನಲ್ಲಿರುವ ಸದಸ್ಯನೊಬ್ಬ “ಸಜಿಪ ದೇರಾಜೆ ರಸ್ತೆ ಮಧ್ಯೆ ಮತ್ತೆ ತಲವಾರು ದಾಳಿ ಯತ್ನ. ಕೊಳಕೆ ಯುವಕರಿಬ್ಬರ ಮೇಲೆ ದಾಳಿ ಯತ್ನ, ಘಟನಾ ಸ್ಥಳದಲ್ಲಿ ಸೇರಿದ ಜನರಿಂದ ಆಕ್ರೋಶ” ಎಂಬುದಾಗಿ ಸುಳ್ಳು ಸುದ್ದಿಯನ್ನು ವೈರಲ್ ಮಾಡಿರುವುದು ಕಂಡು ಬಂದಿರುತ್ತದೆ. ಸದ್ರಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ, ಸಾರ್ವಜನಿಕ ವಲಯದಲ್ಲಿ ಭಯ ಬೀತಿಯನ್ನುಂಟುಮಾಡಿದ ಸದ್ರಿ ವಾಟ್ಸಾಪ್ ಗ್ರೂಪ್ ಸದಸ್ಯನ ವಿರುದ್ಧ ಬುಧವಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ “ಡೆಮಾಕ್ರಾಟಿಕ್ ವಾಯ್ಸ್ ಆಫ್ ಇಂಡಿಯಾ” ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಸದಸ್ಯನಾಗಿರುವ ವ್ಯಕ್ತಿಯೊಬ್ಬ ಇದೇ ಸುಳ್ಳು ಸುದ್ದಿಯನ್ನು ವೈರಲ್ ಮಾಡಿ ಸಾರ್ವಜನಿಕ ವಲಯದಲ್ಲಿ ಭಯ ಬೀತಿಯನ್ನುಂಟು ಮಾಡಿದ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪ್ ಸದಸ್ಯನ ವಿರುದ್ಧವೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment