ಅಪರಾಧ ಪ್ರಕರಣ ತಡೆಗೆ ದ.ಕ. ಪೊಲೀಸರ ಕಠಿಣ ಕ್ರಮ ಮುಂದುವರಿಕೆ : ಟಿಂಟೆಡ್ ಗ್ಲಾಸ್ ಹೊಂದಿದ ವಾಹನಗಳ ವಿರುದ್ದ ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ, ಭಾರೀ ಪ್ರಮಾಣದಲ್ಲಿ ದಂಡ ವಸೂಲಿ - Karavali Times ಅಪರಾಧ ಪ್ರಕರಣ ತಡೆಗೆ ದ.ಕ. ಪೊಲೀಸರ ಕಠಿಣ ಕ್ರಮ ಮುಂದುವರಿಕೆ : ಟಿಂಟೆಡ್ ಗ್ಲಾಸ್ ಹೊಂದಿದ ವಾಹನಗಳ ವಿರುದ್ದ ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ, ಭಾರೀ ಪ್ರಮಾಣದಲ್ಲಿ ದಂಡ ವಸೂಲಿ - Karavali Times

728x90

3 June 2025

ಅಪರಾಧ ಪ್ರಕರಣ ತಡೆಗೆ ದ.ಕ. ಪೊಲೀಸರ ಕಠಿಣ ಕ್ರಮ ಮುಂದುವರಿಕೆ : ಟಿಂಟೆಡ್ ಗ್ಲಾಸ್ ಹೊಂದಿದ ವಾಹನಗಳ ವಿರುದ್ದ ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ, ಭಾರೀ ಪ್ರಮಾಣದಲ್ಲಿ ದಂಡ ವಸೂಲಿ

ಮಂಗಳೂರು, ಜೂನ್ 03, 2025 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಿರುವ ನೂತನ ಪೊಲೀಸ್ ಅಧಿಕಾರಿಗಳು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. 

ಇದೀಗ ಅಪರಾಧಗಳನ್ನು ತಡೆಗಟ್ಟಲು ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೋಮವಾರ ಹಾಗೂ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರಿನ ಗ್ಲಾಸ್ ಗಳಲ್ಲಿ ಬ್ಲಾಕ್ ಫಿಲ್ಮ್ (ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ಮಾಲಕ/ ಚಾಲಕರ ವಿರುದ್ದ ಒಟ್ಟು 223 ಪ್ರಕರಣವನ್ನು ದಾಖಲಿಸಿ, 1,11,500/- ರೂಪಾಯಿ ದಂಡವನ್ನು ವಿಧಿಸಲಾಗಿದೆ. ಅಲ್ಲದೇ 223 ಕಾರುಗಳಿಗೆ ಅಳವಡಿಸಿರುವ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕ್ಕರ್ ಗಳನ್ನು ವಾಹನ ಚಾಲಕರಿಂದ ತೆಗೆಸಿ ಸೂಕ್ತ ಕ್ರಮ ಕೈಗೊಂಡು ಅವರುಗಳಿಗೆ ತಿಳುವಳಿಕೆಯನ್ನು ಸಹ ನೀಡಲಾಗಿರುತ್ತದೆ. 

ನಗರ ವ್ಯಾಪ್ತಿಯಲ್ಲಿ ಸಂಚಾರಿ ಪೆÇಲೀಸ್ ಮತ್ತು ಕಾನೂನು ಸುವ್ಯವಸ್ಥೆ ಪೆÇಲೀಸ್ ಠಾಣಾ ಅಧಿಕಾರಿ-ಸಿಬ್ಬಂದಿಗಳು ಜಂಟಿಯಾಗಿ ಈ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಸೂಚನೆಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. 

ಅಲ್ಲದೇ ಮಂಗಳವಾರ ಪೆÇಲೀಸ್ ಆಯುಕ್ತಕರ ಕಛೇರಿಯ ಸಭಾಂಗಣದಲ್ಲಿ ಹಾಗೂ ಪೆÇಲೀಸ್ ಠಾಣೆಗಳಲ್ಲಿ, ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರು ಶೋ ರೂಂ, ಅಕ್ಸೆಸರಿಸ್ ಶಾಪ್, ಗ್ಯಾರೇಟ್, ಸ್ಟಿಕರ್ ಅಂಗಡಿಗಳ ಮಾಲಕರ ಸಭೆಯನ್ನು ಆಯೋಜಿಸಿದ್ದು, ಸಭೆಯಲ್ಲಿ ಹಾಜರಿದ್ದವರಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಪರಾಧ ಎಸಗಲು ಆರೋಪಿತರು ಟಿಂಟ್ ಅಳವಡಿಸಿರುವ ವಾಹನಗಳನ್ನು ಉಪಯೋಗಿಸುವ ಸಾಧ್ಯತೆ ಇರುವುದರಿಂದ ತಮ್ಮ ಬಳಿ ಬರುವ ಗಿರಾಕಿಗಳ ವಾಹನಗಳ ಗಾಜುಗಳಿಗೆ ಹೆಚ್ಚುವರಿಯಾಗಿ ಟಿಂಟ್ ಗಳನ್ನು ಅಳವಡಿಸದಂತೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. 



  • Blogger Comments
  • Facebook Comments

0 comments:

Post a Comment

Item Reviewed: ಅಪರಾಧ ಪ್ರಕರಣ ತಡೆಗೆ ದ.ಕ. ಪೊಲೀಸರ ಕಠಿಣ ಕ್ರಮ ಮುಂದುವರಿಕೆ : ಟಿಂಟೆಡ್ ಗ್ಲಾಸ್ ಹೊಂದಿದ ವಾಹನಗಳ ವಿರುದ್ದ ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ, ಭಾರೀ ಪ್ರಮಾಣದಲ್ಲಿ ದಂಡ ವಸೂಲಿ Rating: 5 Reviewed By: karavali Times
Scroll to Top