ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ವಿಚಾರ ಬೆಂಬಲಿಸಿ ರೈ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ಸಿಗರಿಂದ ಪಾದಯಾತ್ರೆ - Karavali Times ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ವಿಚಾರ ಬೆಂಬಲಿಸಿ ರೈ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ಸಿಗರಿಂದ ಪಾದಯಾತ್ರೆ - Karavali Times

728x90

15 August 2025

ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ವಿಚಾರ ಬೆಂಬಲಿಸಿ ರೈ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ಸಿಗರಿಂದ ಪಾದಯಾತ್ರೆ

ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ವಿವಿಧ ಸಾಂವಿಧಾನಿಕ ಹುದ್ದೆಗಳ ದುರ್ಬಳಕೆ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡುತ್ತಿರುವುದು ಇದೀಗ ಜನರಿಗೆ ಸತ್ಯ ಎಂದು ಮನವರಿಕೆಯಾಗಿದೆ ಎಂದು ಬಿ ರಮಾನಾಥ ರೈ ಹೇಳಿದರು. 

ರಾಹುಲ್ ಗಾಂಧಿ ಅವರು ಮತ ಕಳ್ಳತನ ಬಗ್ಗೆ ಮಾಡಿರುವ ಗಂಭೀರ ವಿಚಾರವನ್ನು ಬೆಂಬಲಿಸಿ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಸ್ವಾತಂತ್ರ್ಯ ದಿನದ ಧ್ವಜಾರೋಹಣದ ಬಳಿಕ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾಲ್ನಡಿಗೆ ಜಾಥಾ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ಚುನಾವಣಾ ಆಯೋಗದ ತಪ್ಪುಗಳನ್ನು ಪ್ರಶ್ನಿಸಿದರೆ ಬಿಜೆಪಿಗರು ಅದಕ್ಕೆ ಉತ್ತರಿಸುವ ಮೂಲಕ ಭುಜ ಮುಟ್ಟಿ ನೋಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜಗತ್ತಿನಲ್ಲೇ ವಿಶೇಷ ಸ್ಥಾನಮಾನ ಇದೆ. ದೇಶದ ಎಲ್ಲಾ ಜಾತಿ, ಧರ್ಮ, ಭಾಷೆಯ ಜನ ಜಾತ್ಯಾತೀತ ಮನೋಭಾವದೊಂದಿಗೆ ಹೋರಾಟ ನಡೆಸಿ ಪಡೆದುಕೊಂಡ ಸ್ವಾತಂತ್ರ್ಯ ನಮ್ಮದು. ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಮಾನಾಥ ರೈ ಇದೇ ವೇಳೆ ಹೇಳಿದರು. 

ಈ ಸಂದರ್ಭ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಕ್ಷ ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಅಬ್ಬಾಸ್ ಅಲಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಯೂಸುಫ್ ಕರಂದಾಡಿ, ಸುರೇಶ್ ಜೋರಾ, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಐಡಾ ಸುರೇಶ್, ಶೋಭಾ ಶೆಟ್ಟಿ, ಜಗದೀಶ್ ಕುಂದರ್, ಸಂಜೀವ ಪೂಜಾರಿ, ಕರೀಂ ಬೊಳ್ಳಾಯಿ, ಝಕರಿಯಾ ಮಾಲಿಕ್ ಕೊಳಕೆ, ವೆಂಕಪ್ಪ ಪೂಜಾರಿ, ಮಧುಸೂಧನ್ ಶೆಣೈ, ಡೆಂಝಿಲ್ ನೊರೊನ್ಹಾ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ವಿಚಾರ ಬೆಂಬಲಿಸಿ ರೈ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ಸಿಗರಿಂದ ಪಾದಯಾತ್ರೆ Rating: 5 Reviewed By: karavali Times
Scroll to Top