ಮಂಗಳೂರು, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ದೇರಳಕಟ್ಟೆ ಪ್ರಸ್ಟೀಜ್ ವೀವ್ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣದ ಜಂಟಿ ಆಶ್ರಯದಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ರಝಿಯ ಧ್ವಜಾರೋಹಣಗೈದರು.
ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಮ್ಲತ್, ದೇರಳಕಟ್ಟೆ ಪ್ರಸ್ಟೀಜ್ ವೀವ್ ವಸತಿ ಸಮುಚ್ಚಯ ಆಡಳಿತ ಸಮಿತಿ ಅಧ್ಯಕ್ಷ ರಶೀದ್, ಸದಸ್ಯರಾದ ರಶೀದಾ, ಅನೀಷಾ, ಅಕ್ಷತಾ ಟೀಚರ್, ಬೆಳ್ಮ ಇಲೆಕ್ಟ್ರಿಕಲ್ಸ್ ರಫೀಕ್, ವಾಣಿಜ್ಯ ಸಂಕೀರ್ಣದ ಮಾಲಕ ಅಝರ್ ಎಸ್ ಎನ್, ಸಿದ್ದೀಕ್ ಎಸ್ ರಾಝ್, ಡಾ ಶಾಶ್ವಥ್ ಶೆಟ್ಟಿ, ಝುಬೇರ್, ಬಾತಿಶ್ ಪ್ರಸ್ಟೀಜ್, ಶೈಲೇಶ್ ಸ್ಟಾರ್ ಮೊದಲಾದವರು ಭಾಗವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.



























0 comments:
Post a Comment