ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ದೇಶದ ಬಗ್ಗೆ ಬಹುದೊಡ್ಡ ನಿರೀಕ್ಷೆ ಮತ್ತು ಕಲ್ಪನೆಗಳೊಂದಿಗೆ ಹೋರಾಡಿ ದೇಶಕೋಸ್ಕರ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ಜ್ಞಾಪಿಸಬೇಕು. ಭಾರತದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ವೀರ ಪುರುಷರನ್ನು ನೆನೆದು, ಸಿಕ್ಕ ಸ್ವಾತಂತ್ರವನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸದಸ್ಯೆ ಅಲ್ಕಾ ಕೂಡಿಗೆ ಶೆಣೈ ಎಂದು ಹೇಳಿದರು.
ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ಕೇವಲ ದಿನಾಚರಣೆಗೆ ಸೀಮಿತವಾಗಿರದೇ ಪಡೆದ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಪ್ರತಿಯೊಬ್ಬ ಭಾರತೀಯರು ಶ್ರಮ ವಹಿಸಬೇಕು. ಭಾರತೀಯರಾದ ನಾವು ದೇಶದ ಪ್ರಗತಿಯತ್ತ ಚಿಂತಿಸುವುದು ಅಗತ್ಯ ಎಂದರು.
ಮುಖ್ಯೋಪಾಧ್ಯಾಯ ಹರಿಪ್ರಸಾದ್ ಮಾತನಾಡಿ ಪಠ್ಯ ವಿಷಯದಿಂದ ಪಡೆದ ಜ್ಞಾನದಿಂದ ಜೀವನ ರೂಪÀÅಗೊಳ್ಳುವುದಿಲ್ಲ. ಭವಿಷ್ಯದಲ್ಲಿ ಸಾಧನೆಗೈಯಲು ಗುರು ಹಿರಿಯರ ಮಾರ್ಗದರ್ಶನ ಜತೆ ಸಮಯ ನಿರ್ವಹಣೆಯ ಅರಿವು ಅಗತ್ಯ. ಆಧುನಿಕ ವ್ಯವಸ್ಥೆಯಲ್ಲಿ ವೃತ್ತಿ ಆಧಾರಿತ ಶಿಕ್ಷಣಕ್ಕೆ ಪÀÇರಕ ವಾತವರಣ ಒದಗಿಸಿಕೊಡಬೇಕು. ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಬದುಕುವ ಹಕ್ಕು ಇದೆ ಎಂದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಎನ್ ಸಿ ಸಿ ಆರ್ಮಿ ವಿಂಗ್, ಎನ್ ಸಿ ಸಿ ನೇವಲ್ ವಿಂಗ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆÉ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಬಿಂಬಿಸುವ ‘ಈಸೂರು ದಂಗೆ’ ಕಿರು ಪ್ರಹಸನ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಚೈತ್ರ ಶೆಟ್ಟಿ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ವೀಣಾ ದೇವಾಡಿಗ, ಎನ್ ಸಿ ಸಿ ಆರ್ಮಿ ವಿಂಗ್ ಅಧಿಕಾರಿ ರವಿ, ಎನ್ ಸಿ ಸಿ ನೇವಲ್ ವಿಂಗ್ ಅಧಿಕಾರಿ ರತ್ನಾಕರ ಗೌಡ, ಶಿಕ್ಷಕ-ಶಿಕ್ಷಕೇತರರು ವರ್ಗದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಸಾನ್ ಸಜಿತ್ ಸ್ವಾಗತಿಸಿ, ಪ್ರತ್ಯುಷ್ ಜೆ ಎಂ ವಂದಿಸಿದರು. ಮೇಧಾಶ್ರೀ ಮತ್ತು ಝೀಭಾ ಕಾರ್ಯಕ್ರಮ ನಿರೂಪಿಸಿದರು.






























0 comments:
Post a Comment