ಬಿ.ಸಿ.ರೋಡು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ - Karavali Times ಬಿ.ಸಿ.ರೋಡು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ - Karavali Times

728x90

13 September 2025

ಬಿ.ಸಿ.ರೋಡು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ

ಬಂಟ್ವಾಳ, ಸೆಪ್ಟೆಂಬರ್ 13, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಸೆ 11 ರಂದು ಸಂಜೆ ಸಂಭವಿಸಿದೆ. 

ಗಾಂiÀiಗೊಂಡ ಸ್ಕೂಟರ್ ಸವಾರರನ್ನು ಸಜಿಪಮುನ್ನೂರು ಗ್ರಾಮದ ನಂದಾವರ ನಿವಾಸಿ ಅಬ್ದುಲ್ ರಜಾಕ್ (20) ಹಾಗೂ ಅವರ ಸ್ನೇಹಿತ ಮೊಹಮ್ಮದ್ ಅರ್ಫಾಜ್ ಎಂದು ಹೆಸರಿಸಲಾಗಿದೆ. ರಜಾಕ್ ಅವರು ಸೆ 11 ರಂದು ಸಂಜೆ ಸುಮಾರು 5 ಗಂಟೆಗೆ ಅವರ ಸ್ನೇಹಿತ ಮೊಹಮ್ಮದ್ ಅರ್ಫಾಜ್ ಸವಾರನಾಗಿದ್ದ ಸ್ಕೂಟರಿನಲ್ಲಿ ಸಹಸವಾರನಾಗಿ ಬಿ ಸಿ ರೋಡಿನಿಂದ ನಂದಾವರಕ್ಕೆ ಬರುತ್ತಿದ್ದ ವೇಳೆ ಬಿ ಮೂಡ ಗ್ರಾಮದ ಬಿ ಸಿ ರೋಡು ಎನ್ ಜಿ ಸರ್ಕಲ್ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯನ್ನು ಕ್ರಾಸ್ ಮಾಡುತ್ತಿದ್ದಾಗ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ರಂಜಿತ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಪಘಾತದಿಂದ ಸ್ಕೂಟರ್ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳು ಮಂಗಳೂರು-ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರಿಗೆ ಗಾಯ Rating: 5 Reviewed By: karavali Times
Scroll to Top