ಪಾಣೆಮಂಗಳೂರು : ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಟೋ ಚಾಲಕ, ಪ್ರಕರಣ ದಾಖಲು - Karavali Times ಪಾಣೆಮಂಗಳೂರು : ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಟೋ ಚಾಲಕ, ಪ್ರಕರಣ ದಾಖಲು - Karavali Times

728x90

13 September 2025

ಪಾಣೆಮಂಗಳೂರು : ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಟೋ ಚಾಲಕ, ಪ್ರಕರಣ ದಾಖಲು

 ಬಂಟ್ವಾಳ, ಸೆಪ್ಟೆಂಬರ್ 13, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಪಾಯಕಾರಿಯಾಗಿ ಅಟೋ ರಿಕ್ಷಾ ಚಲಾಯಿಸಿದ ಚಾಲಕನೋರ್ವ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ರಿಕ್ಷಾ ನಿಲ್ಲಿಸದೆ ಪರಾರಿಯಾದ ಘಟನೆ ಪಾಣೆಮಂಗಳೂರು ಪೇಟೆಯಲ್ಲಿ ಸೆ 12 ರಂದು ಬೆಳಿಗ್ಗೆ ಸಂಭವಿಸಿದೆ. 

ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಎಎಸ್ಸೈ ಸುರೇಶ್ ಪಿ ಅವರೊಂದಿಗೆ ಎಚ್ ಸಿ ಮಧು ವೈ ಎಂ (35) ಎಂಬವರು ಗುರುವಾರ ಬೆಳಿಗ್ಗೆ ರೌಂಡ್ಸ್ ಕರ್ತವ್ಯದ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ನಿಲ್ಲಿಸಿ ತಪಾಸಣೆ ಮಾಡುತ್ತಿದ್ದ ವೇಳೆ ಆಲಡ್ಕ ಕಡೆಯಿಂದ ಪಾಣೆಮಂಗಳೂರು ಕಡೆಗೆ ನೋಂದಣಿ ಸಂಖ್ಯೆ ಕೆಎ19 ಎಸಿ5136 ಸಂಖ್ಯೆಯ ಅಟೋ ರಿಕ್ಷಾವನ್ನು ಚಾಲಕ ಸಮವಸ್ತ್ರ ಧರಿಸದೆ ಬಂದ್ದಿದ್ದು, ಅಟೋ ರಿಕ್ಷಾ ನಿಲ್ಲಿಸುವಂತೆ ಸೂಚಿಸಿದರೂ ಜಿಗ್ ಜಾಗ್ ರೀತಿ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಪೊಲೀಸ್ ಸಿಬ್ಬಂದಿಯ ಬಲ ಕಾಲಿಗೆ ಮತ್ತು ಬಲ ಭುಜಕ್ಕೆ ಅಟೋವನ್ನ ತಾಗಿಸಿ ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಟೋ ಚಾಲಕ, ಪ್ರಕರಣ ದಾಖಲು Rating: 5 Reviewed By: karavali Times
Scroll to Top