ಮಂಗಳೂರು, ಸೆಪ್ಟೆಂಬರ್ 01, 2025 (ಕರಾವಳಿ ಟೈಮ್ಸ್) : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕೆ.ಪಿ.ಎಂ.ಇ.ಎ ಕಾಯ್ದೆಯಡಿ ನೋಂದಾವಣೆಯಾಗದೆ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್ ಗಳಿಗೆ ಎಚ್ಚರಿಕೆಯ ನೋಟೀಸ್ ನೀಡಲಾಗಿದ್ದು, ಇದನ್ನು ಮುಂದುವರಿಸಿದಲ್ಲಿ ಕೆ.ಪಿ.ಎಂ.ಇ.ಎ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಂಡು ನಿರ್ದಾಕ್ಷಿಣವಾಗಿ ಅಂತಹ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎಚ್.ಆರ್ ತಿಮ್ಮಯ್ಯ ಸೂಚಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಹಲವು ಕ್ಲಿನಿಕ್ ಗಳು/ ಖಾಸಗಿ ಸಂಸ್ಥೆಗಳು ಕೆ.ಪಿ.ಎಂ.ಇ.ಎ ಕಾಯ್ದೆಯ ಪ್ರಕಾರ ನೋಂದಣಿಯಾಗದ ಬಗ್ಗೆ Indian Association of Dermatologists, Venereologists & Leprologists Dakshina Kannada (IADVL) ನೀಡಿರುವ ದೂರಿನ ಅನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ನೇತೃತ್ವದಲ್ಲಿ ತುರ್ತು ಸಭೆಯನ್ನು ಕರೆದು, ಕೆ.ಪಿ.ಎಂ.ಇ.ಎ ಕಾಯ್ದೆಯ ಪ್ರಕಾರ, ತಂಡಗಳನ್ನು ರಚಿಸಿ, ಪರವಾನಿಗೆ/ ನೋಂದಾವಣೆ ಇಲ್ಲದಿರುವ ಸಂಸ್ಥೆ/ ಕ್ಲಿನಿಕ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ಸಂಸ್ಥೆಗಳು ನೋಂದಾಯಿಸದೆ ಕಾರ್ಯಚರಿಸಿರುವುದು ಕಂಡು ಬಂದಿರುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳನ್ನು ಮುಚ್ಚಿಸಲು ಸೂಚಿಸಲಾಗಿದ್ದು, ಅವರಿಗೆ ನೋಟೀಸ್ ನೀಡಿ, ನಿಗದಿತ ಅವಧಿಯೊಳಗೆ ಸರಿಪಡಿಸಲು ತಿಳಿಸಲಾಗಿರುತ್ತದೆ.
ಭೇಟಿ ಸಂದರ್ಭದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಲವಾರುBeauty Saloon ಗಳಲ್ಲಿ Dermatologist/ ತಜ್ಞ ವೈದ್ಯರು ಲಭ್ಯವಿಲ್ಲದೆ Skin Care and Aesthetic Clinic ಎಂದು Board ಹಾಕಿಕೊಂಡಿರುವುದು ಕಂಡು ಬಂದಿರುತ್ತದೆ ಹಾಗೂ Hair Transplant, Laser Treatment, Micro needling ಹಾಗೂ Invasive Procedure ಕಾನೂನು ಬಾಹಿರವಾಗಿ ನಡೆಸುತ್ತಿದ್ದು, ದೇರಳಕಟ್ಟೆ ವ್ಯಾಪ್ತಿಯಲ್ಲಿ ಒಂದು ಸಂಸ್ಥೆ ಹಾಗೂ ಮಂಗಳೂರು ನಗರದಲ್ಲಿ ಒಂದು ಸಂಸ್ಥೆ ಮುಚ್ಚಿಸಲಾಗಿದೆ. ಸದರಿ ಭೇಟಿಯ ಸಂದರ್ಭದಲ್ಲಿ 10 ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಕೆ.ಪಿ.ಎಂ.ಇ.ಎ ಕಾಯ್ದೆ ಉಲ್ಲಂಘನೆ ಮಾಡಿದಲ್ಲಿ ಶಾಶ್ವತವಾಗಿ ಸಂಸ್ಥೆಗಳನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಕಾರ್ಯಚರಣೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಚರ್ಮರೋಗ ತಜ್ಞರು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.
ಈ ಹಿನ್ನಲೆಯಲ್ಲಿ ಅನಧೀಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕ್ಲಿನಿಕ್‍ಗಳು/ ಸಂಸ್ಥೆಗಳಾದ Cosmetic Studio/ Hair Transplant Health & glo Clinic ಗಳು Invasive Procedure/ Laser ಇತ್ಯಾದಿ ಉಪಕರಣಗಳನ್ನು ಉಪಯೋಗಿಸುವುದು, ಕೆ.ಪಿ.ಎಂ.ಇ.ಎ ಕಾಯ್ದೆಯನ್ನು ಉಲ್ಲಂಘಿಸಿದಂತಾಗುವುದು, ಅಲ್ಲದೆ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಸಾಧ್ಯತೆಗಳು ಇರುವ ಕಾರಣ ಸೂಕ್ತವಾದ ವೈದ್ಯಕೀಯ ದಾಖಲೆಗಳು ಪ್ರಮಾಣ ಪತ್ರಗಳೊಂದಿಗೆ ಕೆ.ಪಿ.ಎಂ.ಇ.ಎ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಬೇಕು ಇಲ್ಲವಾದಲ್ಲಿ ಕೆ.ಪಿ.ಎಂ.ಇ.ಎ ಕಾಯ್ದೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment