ಬಂಟ್ವಾಳ, ಸೆಪ್ಟೆಂಬರ್ 12, 2025 (ಕರಾವಳಿ ಟೈಮ್ಸ್) : ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ 50 ರ ಹರೆಯದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಬಾಲಕಿಯ ನೆರೆಮನೆ ವಾಸಿ ಅಬೂಬಕ್ಕರ್ (50) ಎಂದು ಹೆಸರಿಸಲಾಗಿದೆ.
ಮಾರ್ಚ್ 29 ರಂದು ಸಂಜೆ 5 ಗಂಟೆ ವೇಳೆಗೆ ಬಾಲಕಿ ಆಟವಾಡುತ್ತಿದ್ದಾಗ ನೆರೆ ಮನೆಯ ವಾಸಿ ಅಬೂಬಕ್ಕರ್ (50) ಎಂಬಾತ ಯಾರೂ ವಾಸ್ತವ್ಯ ಇಲ್ಲದ ಮನೆಯ ಹಿಂಬಾಗಿಲಿನಲ್ಲಿರುವ ಸಿಟೌಟಿಗೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 135/2025 ಕಲಂ 64 (1), 351(2) BNS ಮತ್ತು 4 (2) PROTECTION OF CHILDREN FROM SEXUAL OFFENCES ACT 2012 ರಂತೆ ಪ್ರಕರಣ ದಾಖಲಾಗಿದ್ದು,ಆರೊಪಿಯನ್ನು ದಸ್ತಗಿರಿ ಮಾಡಿದ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿದಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜನರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದ್ದು, ಈ ಬಗ್ಗೆಯೂ ಠಾಣಾ ಅಪರಾಧ ಕ್ರಮಾಂಕ 136/2025 ಕಲಂ126 (2) 115 (2) 351 (1) ರಂತೆ ಪ್ರಕರಣ ದಾಖಲಾಗಿದೆ.











0 comments:
Post a Comment