ಪಾಣೆಮಂಗಳೂರು-ನೆಹರುನಗರ ನಿವಾಸಿ ಮೊಹಮ್ಮದ್ ನಿಹಾಲ್ ನಝೀರ್ ಅವರಿಗೆ ಚಿನ್ನ ಹಾಗೂ ಗೂಡಿನಬಳಿ ನಿವಾಸಿ ಮೊಹಮ್ಮದ್ ಅಯಾನ್ ಅವರಿಗೆ ಬೆಳ್ಳಿ ಪದಕ
ಮಂಗಳೂರು, ಸೆಪ್ಟೆಂಬರ್ 12, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025ರಲ್ಲಿ 2 ಪದಕಗಳು ದೊರೆತಿವೆ.
ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಪಟುಗಳು 1 ಚಿನ್ನ ಹಾಗೂ 1 ಬೆಳ್ಳಿ ಸಹಿತ ಒಟ್ಟು 2 ಪದಕಗಳನ್ನು ತಮ್ಮದಾಗಿಸಿಕೊಂಡು ಸಾಧನೆಗೈದಿದ್ದಾರೆ.
ಮೊಹಮ್ಮದ್ ನಿಹಾಲ್ ನಝೀರ್ ಅವರು 69 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಮೊಹಮ್ಮದ್ ಅಯಾನ್ ಅವರು 82 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಪದಕ ಸಾಧನೆಯೊಂದಿಗೆ ಈ ಇಬ್ಬರು ಕ್ರೀಡಾಪಟುಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ-2025ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಚಿನ್ನದ ಪದಕ ಗೆದ್ದ ಮೊಹಮ್ಮದ್ ನಿಹಾಲ್ ನಝೀರ್ ಅವರು ಮಂಗಳೂರಿನ ಯೇನಪೋಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಪಿಸಿಎಂಸಿ ವಿಭಾಗದ ವಿದ್ಯಾರ್ಥಿಯಾಗಿದ್ದು, ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ದಿವಂಗತ ಅಬ್ದುಲ್ ನಝೀರ್ ಮೊಹಮ್ಮದ್ ಹಾಗೂ ಸುಮಯ್ಯಾ ದಂಪತಿಯ ಪುತ್ರನಾಗಿದ್ದಾರೆ.
ಬೆಳ್ಳಿ ಪದಕ ಗೆದ್ದ ಮೊಹಮ್ಮದ್ ಅಯಾನ್ ಅವರು ತುಂಬೆ ಬಿ ಎ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಜಿ ಕೆ ಮುಹಮ್ಮದ್ ಆರಿಫ್-ನಸೀಮಾ ದಂಪತಿಯ ಪುತ್ರನಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹ ತರಬೇತುದಾರ ಮೆಹೂಲ್ ಬಂಗೇರಾ ಅವರು ಈ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ.





















0 comments:
Post a Comment