ಪುತ್ತೂರು, ಸೆಪ್ಟೆಂಬರ್ 15, 2025 (ಕರಾವಳಿ ಟೈಮ್ಸ್) : ಪುತ್ತೂರಿನಿಂದ ಜಾವಗಲಿಗೆ ಕೆ ಎಸ್ ಆರ್ ಟಿ ಸಿ ಬಸ್ ಸೇವೆ ಆರಂಭ ಮಾಡುವಂತೆ ಕರ್ನಾಟಕ ಸಾರಿಗೆ ಸಂಸ್ಥೆ ಪುತ್ತೂರು ಡಿಪೆÇೀಗೆ ಶಾಸಕ ಅಶೋಕ್ ರೈ ಸೂಚಿಸಿದ್ದಾರೆ.
ಈ ಹಿಂದೆ ಪುತ್ತೂರಿನಿಂದ ಜಾವಗಲಿಗೆ ಬಸ್ ಸೇವೆ ಇತ್ತು. ಆದನ್ನು ರದ್ದು ಮಾಡಲಾಗಿತ್ತು. ಸುಮಾರು 15 ವರ್ಷಗಳಿಂದ ನಿಲ್ಲಿಸಲಾಗಿರುವ ಸೇವೆಯನ್ನು ಶೀಘ್ರವೇ ಪ್ರಾರಂಭ ಮಾಡುವಂತೆ ಶಾಸಕರು ಸೂಚನೆ ನೀಡಿದ್ದಾರೆ.
ಜಾವಗಲಿಗೆ ಹೆಚ್ಚಿನ ಭಕ್ತರು ಪುತ್ತೂರಿನಿಂದ ನಿತ್ಯವೂ ತೆರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪುತ್ತೂರಿನಿಂದ ಕೆ ಎಸ್ ಆರ್ ಟಿ ಸಿ ಬಸ್ ಸೇವೆ ಆರಂಭಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಶಕೂರ್ ಹಾಜಿ ಅವರು ಕೆಲ ತಿಂಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದೀಗ ಶಾಸಕರು ಬಸ್ ಸೇವೆ ಆರಂಭ ಮಾಡುವಂತೆ ಸೂಚನೆ ನೀಡಿದ್ದು ಈ ಭಾಗದ ಜನರ ಬಹುಕಾಲದ ಬೇಡಿಕೆಗೆ ಶಾಸಕ ಅಶೋಕ್ ರೈ ಸ್ಪಂದಿಸಿದ್ದಾರೆ.














0 comments:
Post a Comment