ಮಂಗಳೂರು, ಸೆಪ್ಟೆಂಬರ್ 12, 2025 (ಕರಾವಳಿ ಟೈಮ್ಸ್) : 2024 ರ ಆಗಸ್ಟ್ 6 ರಂದು ಜೋಕಟ್ಟೆ ಬಾಡಿಗೆ ಮನೆಯೊಂದರಲ್ಲಿ ತನ್ನ ಚಿಕ್ಕಪ್ಪನೊಂದಿಗೆ ವಾಸವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಲೈಂಗಿಕ ಹಲ್ಲೆ ನಡೆಸಿ, ಕೊಲೆ ಮಾಡಿದ ಆರೋಪಿಗೆ ನ್ಯಾಯಾಲಯ ಮರಣ ದಂಡನೆ, ಜೀವಾವಧಿ ಹಾಗೂ ದಂಡ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಶಿಕ್ಷೆಗೊಳಗಾಗಿರುವ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ, ಹಂಚಿನಾಳ ಗ್ರಾಮದ ಪರಸಘಡ, ಮಾದರ ಓಣಿ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ (51) ಎಂದು ಹೆಸರಿಸಲಾಗಿದೆ.
ಪಣಂಬೂರು ಪೆÇಲೀಸ್ ಠಾಣಾ ವ್ಯಾಪ್ತಿಯ 62ನೇ ತೋಕೂರು ಗ್ರಾಮದ ಜೋಕಟ್ಟೆ ಬಾಡಿಗೆ ಮನೆಯೊಂದಕ್ಕೆ 2024ರ ಆಗಸ್ಟ್ 6 ರಂದು ಬೆಳಿಗ್ಗೆ ಸುಮಾರು 9-9.15 ಸಮಯದ ಮಧ್ಯೆ ಅವಧಿಯಲ್ಲಿ ಅಕ್ರಮ ಪ್ರವೇಶ ಮಾಡಿದ ಆರೋಪಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿ, ಬಾಲಕಿಯನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಘಟನೆಯ ಬಗ್ಗೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2024 ರಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡು ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-2 ಫೆÇಕ್ಸೋ)ಕ್ಕೆ ಕಲಂ 103 (1) 332(ಎ) ಬಿ ಎನ್ ಎಸ್ ಕಾಯ್ದೆ ಮತ್ತು ಕಲಂ 4(2), ಪೆÇೀಕ್ಸೋ ಕಾಯ್ದೆಯಂತೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪ್ರಕರಣದ ಆರೋಪಿ ಫಕ್ಕೀರಪ್ಪ ಹಣಮಪ್ಪ ಮಾದರ ಎಂಬಾತನಿಗೆ ನ್ಯಾಯಾಲಯವು ಕಲಂ 103(1) (ಕೊಲೆ) ಬಿ ಎನ್ ಎಸ್ ಕಾಯ್ದೆಯಡಿಯಲ್ಲಿ ಮರಣ ದಂಡನೆ ಶಿಕ್ಷೆ, ಕಲಂ 4(2) (ಲೈಂಗಿಕ ಹಲ್ಲೆ) ಪೆÇಕ್ಸೋ ಕಾಯ್ದೆಯಡಿಯಲ್ಲಿ ಅಜೀವ ಕಾರಾಗೃಹ ಮತ್ತು 50 ಸಾವಿರ ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಾರಗೃಹ ಶಿಕ್ಷೆ ಮತ್ತು ಕಲಂ 332(ಎ) (ಅಪರಾಧಿಕ ಅತಿಕ್ರಮಣ) ಬಿ ಎನ್ ಎಸ್ ಕಾಯ್ದೆಯಡಿಯಲ್ಲಿ 50 ಸಾವಿರ ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಾರಗೃಹ ಶಿಕ್ಷೆಯನ್ನು ಪ್ರಕಟಿಸಿ ಆದೇಶ ನೀಡಿದೆ.
ಪ್ರಕರಣದ ಆರೋಪಿಯು ಜಾಮೀನು ಸಿಗದೆ ಸುಮಾರು 1 ವರ್ಷದಿಂದ ವಿಚಾರಣಾ ಬಂಧಿಯಾಗಿದ್ದ ಸಮಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತನ ಅಪರಾಧ ಸಾಬೀತಾಗಿ ಶಿಕ್ಷೆಯಾಗಿರುತ್ತದೆ. ಪ್ರಕರಣ ದಾಖಲಾಗಿ ಕೇವಲ 1 ವರ್ಷ 1 ತಿಂಗಳಿನಲ್ಲಿಯೇ ಸಂಪೂರ್ಣ ಪ್ರಕರಣದ ವಿಚಾರಣೆ ನಡೆದು ತೀರ್ಪು ಪ್ರಕಟಗೊಂಡಿದೆ ಎಂಬುದು ಗಮನಾರ್ಹ.
ಪ್ರಕರಣದ ತನಿಖೆಯು ಮಂಗಳೂರು ನಗರದ ಹಿಂದಿನ ಪೆÇಲೀಸ್ ಕಮಿಷನರ್ ಅನುಪಮ್ ಅಗರವಾಲ್, ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್ (ಕಾನೂನು ಸುವ್ಯವಸ್ಥೆ) ಮತ್ತು ಬಿ ಪಿ ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ), ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಂತೆ ಪಣಂಬೂರು ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ಅವರು ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿರುತ್ತಾರೆ.
ಪ್ರಸ್ತುತ ನ್ಯಾಯಾಲಯದ ವಿಚಾರಣಾ ಕಾಲದಲ್ಲಿ ಕೋರ್ಟ್ ಮಾನಿಟರಿಂಗ್ ಡಿಸಿಪಿ ುಥುನ್ ಎಚ್ ಎನ್ (ಕಾನೂನು ಮತ್ತು ಸುವ್ಯವಸ್ಥೆ), ಉಪ ಪೊಲೀಸ್ ಆಯುಕ್ತ ಕೆ ರವಿಶಂಕರ್ (ಅಪರಾಧ ಮತ್ತು ಸಂಚಾರ) ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಪ್ರಕರಣದ ತನಿಖಾ ಸಂದರ್ಭ ಪಣಂಬೂರು ಠಾಣಾ ಪಿಎಸ್ಸೈಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ, ಜ್ಞಾನಶೇಖರ, ಎಚ್ ಸಿಗಳಾದ ಸತೀಶ್ ಎಂ ಆರ್, ಪ್ರೇಮಾನಂದ, ಜೇಮ್ಸ್ ಪಿ ಜೆ, ಸಯ್ಯದ್ ಇಮ್ತಿಯಾಜ್, ನವೀನ್ ಚಂದ್ರ, ಪಿಸಿಗಳಾದ ರಾಕೇಶ್, ಫಕೀರೇಶ, ಶಶಿಕುಮಾರ್ ಶೆಟ್ಟರ್ ಹಾಗೂ ಕೋರ್ಟ್ ಮಾನಿಟರಿಂಗ್ ನಲ್ಲಿ ಸುರೇಶ್ ರಾಥೋಡ್ ಅವರುಗಳು ಸಹಕರಿಸಿರುತ್ತಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀಮತಿ ಸಹನಾ ದೇವಿ ಅವರು ವಾದ ಮಂಡಿಸಿದ್ದಾರೆ.

















0 comments:
Post a Comment