ಬಂಟ್ವಾಳ, ಸೆಪ್ಟೆಂಬರ್ 11, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಾಲಾಡಳಿತ ಮಂಡಳಿ ಸಂಚಾಲಕ ಫಾದರ್ ವಿಕ್ಟರ್ ಡಿ ಸೋಜಾ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾಡಳಿತ ಸಮಿತಿ ಸದಸ್ಯ ನ್ಯಾಯವಾದಿ-ನೋಟರಿ ಅಶ್ವನಿ ಕುಮಾರ್ ರೈ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸಲೀಂ ಬೋಳಂಗಡಿ ಶುಭ ಹಾರೈಸಿದರು.
ಇದೇ ವೇಳೆ ಕೊಪ್ಪಳ ಜಿಲ್ಲೆಯಲ್ಲಿ ಕಾಯಕ ಕಣ್ಮಣಿ ವೀರ ರಾಜ್ಯ ಪ್ರಶಸ್ತಿ-2024 ಪಡೆದ ಶಾಲಾ ಹಿರಿಯ ಶಿಕ್ಷಕ ತಿಪ್ಪೇಸ್ವಾಮಿ ಅವರನ್ನು ಹಾಗೂ ಬಂಟ್ವಾಳ ತಾಲೂಕಿನ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸ್ಥಳೀಯ ಇನ್ಫೆಂಟ್ ಜೀಸಸ್ ಶಾಲಾ ಮುಖ್ಯ ಶಿಕ್ಷಕಿ ತೆರೆಸಾ ಡಿ’ಮೆಲ್ಲೋ ಅವರನ್ನು ಸನ್ಮಾನಿಸಲಾಯಿತು. ಜೊತೆಯಲ್ಲಿ ಪ್ರೌಢಶಾಲಾ ಎಲ್ಲಾ ಶಿಕ್ಷಕ ವೃಂದದವರನ್ನೂ ಸನ್ಮಾನಿಸಲಾಯಿತು. ಶಿಕ್ಷಕ ವೃಂದದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ದೀಪಿಕಾ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಸಾಲಿಯಾನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ್ ಕುಂದರ್, ಮುಖ್ಯೋಪಾಧ್ಯಾಯ ಸಾಧು, ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷ ಅನಿಲ್ ಫ್ರಾಂಕ್ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಸುಮಂತ್ ಬಾಳಿಗ ಸ್ವಾಗತಿಸಿ, ಲಕ್ಷಿತ್ ವಂದಿಸಿದರು. ಯಗ್ನೇಶ್ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿ ಆರನ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.















0 comments:
Post a Comment