ಬಂಟ್ವಾಳ : ಎಸ್.ವಿ.ಎಸ್. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಬಂಟ್ವಾಳ, ಸೆಪ್ಟೆಂಬರ್ 11, 2025 (ಕರಾವಳಿ ಟೈಮ್ಸ್) : ವಿದ್ಯಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಗುರುವಿನ ಮಾರ್ಗದರ್ಶನವಿಲ್ಲದೇ ಯಶಸ್ವಿಯಾಗಲು ಸಾಧ್ಯವಿಲ್ಲ. ಸಮಾಜದ ಯಾವುದೇ ವೃತ್ತಿಯಲ್ಲಿರುವವರೂ ಕೂಡ ಶಿಕ್ಷಕರ ಸಹಕಾರದಿಂದ ಬಂದವರಾಗಿದ್ದಾರೆ ಎಂದು ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ಪದವಿ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಹೇಳಿದರು.
ಎಸ್ ವಿ ಎಸ್ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಕಾಲೇಜಿನ ಪಿಯು ಪ್ರಾಂಶುಪಾಲ ಸುದರ್ಶನ್ ಬಿ, ಉಪನ್ಯಾಸಕರಾದ ಶ್ರೀಮತಿ ಅಖಿಲಾ ಪೈ, ಶಶಿಧರ್, ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಪ್ರಜ್ವಲ್ ಪ್ರಭು ಸ್ವಾಗತಿಸಿ, ಶಾರದಾ ಶಿವಪ್ಪ ಮಾದರ ವಂದಿಸಿದರು. ಕು ಪ್ರತೀಕ ಹಾಗೂ ತಂಡದವರು ಪ್ರಾರ್ಥಿಸಿದರು. ರಕ್ಷಿತ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.













0 comments:
Post a Comment