ದರೋಡೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು - Karavali Times ದರೋಡೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು - Karavali Times

728x90

21 September 2025

ದರೋಡೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು

ಬಂಟ್ವಾಳ, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2015 ಹಾಗೂ 2016 ರಲ್ಲಿ ನಡೆದ 2 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಮಂಜೇಶ್ವರ-ಕೂಳೂರು ನಿವಾಸಿ ಅಶ್ರಫ್ ಅಲಿಯಾಸ್ ಚಿಲ್ಲಿ ಅಶ್ರಫ್ (32) ಎಂಬಾತನನ್ನು ಭಾನುವಾರ ಮಂಜೇಶ್ವರ-ಕೂಳೂರಿನಲ್ಲಿ ವಿಟ್ಲ ಪೊಲೀಸರು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. 

ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪೇಟೆಯಲ್ಲಿ 2015ರ ಆಗಸ್ಟ್ 7 ರಂದು ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿ ಎರಚಿ  ದರೋಡೆ  ನಡೆಸಿದ ಪ್ರಕರಣದಲ್ಲಿ ದಸ್ತಗಿರಿಯಾಗದೇ ಈತ ತಲೆಮರೆಸಿಕೊಂಡಿದ್ದು. ಈ ಬಗ್ಗೆ ಎಲ್ ಪಿ ಸಿ-03/2025 ರಂತೆ ವಾರೆಂಟ್ ಜಾರಿಯಾಗಿರುತ್ತದೆ. 

2016 ರ ಜನವರಿ 23 ರಂದು ಕೊಳ್ನಾಡು ಗ್ರಾಮದ ವೈನ್ ಶಾಪ್ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ ಬಗ್ಗೆ ದಾಖಲಾಗಿದ್ದ ಪ್ರಕರಣದಲ್ಲೂ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದು, ಈ ಬಗ್ಗೆಯೂ ನ್ಯಾಯಾಲಯದಿಂದ 82 ಮತ್ತು 83 ವಾರಂಟ್ ಜಾರಿಯಾಗಿತ್ತು. 

ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದರೋಡೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು Rating: 5 Reviewed By: karavali Times
Scroll to Top