ಬಂಟ್ವಾಳದಲ್ಲಿ ಲೋಕ ಅದಾಲತ್ : ಬಾಕಿ ಇದ್ದ ಹಲವು ಪ್ರಕರಣಗಳು ಇತ್ಯರ್ಥ - Karavali Times ಬಂಟ್ವಾಳದಲ್ಲಿ ಲೋಕ ಅದಾಲತ್ : ಬಾಕಿ ಇದ್ದ ಹಲವು ಪ್ರಕರಣಗಳು ಇತ್ಯರ್ಥ - Karavali Times

728x90

14 September 2025

ಬಂಟ್ವಾಳದಲ್ಲಿ ಲೋಕ ಅದಾಲತ್ : ಬಾಕಿ ಇದ್ದ ಹಲವು ಪ್ರಕರಣಗಳು ಇತ್ಯರ್ಥ

ಬಂಟ್ವಾಳ, ಸೆಪ್ಟೆಂಬರ್ 14, 2025 (ಕರಾವಳಿ ಟೈಮ್ಸ್) : ಬಂಟ್ವಾಳ ನ್ಯಾಯಾಲಯದಲ್ಲಿ ಬಾಕಿ ಇದ್ದ 6228 ಪ್ರಕರಣಗಳ ಪೈಕಿ ಶನಿವಾರ ನಡೆದ ಲೋಕ ಅದಾಲತಿನಲ್ಲಿ 785 ಪ್ರಕರಣಗಳು ಇತ್ಯರ್ಥಗೊಂಡು 32,68,475/- ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿ ಒಟ್ಟು 9898 ಪಿ ಎಲ್ ಸಿ ಪ್ರಕರಣಗಳು (ದಾವಾ ಪೂರ್ಣ ಪ್ರಕರಣಗಳು) ಇತ್ಯರ್ಥಗೊಂಡಿದ್ದು, 3,02,54,522/- ರೂಪಾಯಿ ಸಂದಾಯವಾಗಿದೆ. 

ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ ಪಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಎನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಕೆ ಎಸ್ ಹಾಗೂ ನ್ಯಾಯಿಕ ಸಂಧಾನಕಾರರಾದ ಅನುರಾಧ ಎ ವಿ, ಪೂಜಾಶ್ರೀ ಮತ್ತು ಕಾರ್ತಿಕ್ ಅವರು ಅದಾಲತಿನಲ್ಲಿ ಭಾಗವಹಿಸಿದ್ದರು. 

ಲೋಕ ಅದಾಲತಿಗೆ ಬಂಟ್ವಾಳ ವಕೀಲರ ಸಂಘ, ಕಂದಾಯ ಇಲಾಖೆ, ಪುರಸಭೆ, ಪೆÇಲೀಸ್ ಇಲಾಖೆ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಸಂಸ್ಥೆಗಳು ಸಹಕರಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಲೋಕ ಅದಾಲತ್ : ಬಾಕಿ ಇದ್ದ ಹಲವು ಪ್ರಕರಣಗಳು ಇತ್ಯರ್ಥ Rating: 5 Reviewed By: karavali Times
Scroll to Top