ಬಂಟ್ವಾಳ, ಅಕ್ಟೋಬರ್ 14, 2025 (ಕರಾವಳಿ ಟೈಮ್ಸ್) : ಚಲಿಸುತ್ತಿದ್ದ ಕಾರನ್ನು ಒಮ್ಮೆಲೆ ರಸ್ತೆಯಲ್ಲೇ ನಿಲ್ಲಿಸಿ ಬಾಗಿಲು ತೆರೆದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಅಜ್ಜಿಬೆಟ್ಟು ಗ್ರಾಮದ ಬಸ್ತಿಕೋಡಿ ಬಸದಿ ದ್ವಾರದ ಮುಂಭಾಗದಲ್ಲಿ ಅ 3 ರಂದು ಸಂಭವಿಸಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ಬಸ್ತಿಕೋಡಿ ನಿವಾಸಿ ವಿಶ್ವನಾಥ ಆಚಾರ್ಯ ಎಂದು ಹೆಸರಿಸಲಾಗಿದೆ. ಇವರು ಅ 3 ರಂದು ಬೆಳಿಗ್ಗೆ ತನ್ನ ಎಲೆಕ್ಟ್ರಿಕಲ್ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಬಸ್ತಿಕೋಡಿ ಬಸದಿ ಮುಂಭಾಗ ತಲುಪಿದಾಗ ಎದುರಿನಿಂದ ರಫೀಕ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ಏಕಾಏಕಿ ಒಮ್ಮಲೆ ರಸ್ತೆಯಲ್ಲೇ ಬ್ರೇಕ್ ಹಾಕಿ ನಿಲ್ಲಿಸಿ ಬಲಭಾಗದ ಬಾಗಿಲು ತೆರೆದ ಪರಿಣಾಮ ಕಾರಿನ ಹಿಂಭಾಗದಲ್ಲಿ ಬರುತ್ತಿದ್ದ ವಿಶ್ವನಾಥ ಅವರ ಸ್ಕೂಟರಿಗೆ ಕಾರಿನ ಬಾಗಿಲು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ವಿಶ್ವನಾಥ ಆಚಾರ್ಯ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ವಿಶ್ವನಾಥ ಅವರ ಪತ್ನಿ ಶ್ರೀಮತಿ ಪವಿತ್ರ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment