ಬಂಟ್ವಾಳ, ಅಕ್ಟೋಬರ್ 14, 2025 (ಕರಾವಳಿ ಟೈಮ್ಸ್) : ಸ್ಕೂಟರ್ ಹಾಗೂ ಬೈಕುಗಳ ನಡುವೆ ಅಪಘಾತದಲ್ಲಿ ಮೂವರು ಗಾಯಗೊಂಡು ಆಸ್ಪತೆಗೆ ದಾಖಲಾದ ಘಟನೆ ಮೂಡಪಡಕೋಡಿ ಗ್ರಾಮದ ಗುಂಪಕಲ್ಲು ಎಂಬಲ್ಲಿ ಅ 12 ರಂದು ಸಂಭವಿಸಿದೆ.
ಅಪಘಾತದಲ್ಲಿ ಸ್ಕೂಟರ್ ಸವಾರ ಮೂಡಪಡಕೋಡಿ ಗ್ರಾಮದ ಬಾಂಬಿಲ ನಿವಾಸಿ ಇರ್ಷಾದ್ (36) ಹಾಗೂ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಗಾಯಾಳು ಸ್ಕೂಟರ್ ಸವಾರ ಇರ್ಷಾದ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಅ 12 ರಂದು ಮೂಡಪಡಕೊಡಿ ಗ್ರಾಮದ ಗುಂಪಕಲ್ಲು ಎಂಬಲ್ಲಿರುವ ನೌಪಲ್ ಅವರ ಅಂಗಡಿಯಿಂದ ಸಾಮಾನು ಖರೀದಿ ಮಾಡಿ ಬಿ ಸಿ ರೋಡ್ ಕಡೆ ಹೋಗುವರೇ ತನ್ನ ಸ್ಕೂಟರಿನಲ್ಲಿ ಗುಂಪಕಲ್ಲು ಎಂಬಲ್ಲಿ ಹಾದು ಹೋಗಿರುವ ಕಡೂರು-ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಗೆ ಬರುವ ವೇಳೆ ಬೆಳ್ತಂಗಡಿ ಕಡೆಯಿಂದ ಬಂದ ಬೈಕ್ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಡು ವಾಹನವೊಂದನ್ನು ಒವರ್ ಟೇಕ್ ಮಾಡುವ ಭರದಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರ್ ಸವಾರ ಹಾಗೂ ಬೈಕ್ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅವರನ್ನು ಮಂಗಳೂರು ಜನಪ್ರಿಯ ಅಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment