ಬಂಟ್ವಾಳ, ಅಕ್ಟೋಬರ್ 21, 2025 (ಕರಾವಳಿ ಟೈಮ್ಸ್) : ಕಾರೊಂದು ಬಿ ಸಿ ರೋಡು ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದು ಚಾಲಕ ಸಹಿತ ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಉದ್ಯೋಗಿಗಳು ಗಾಯಗೊಂಡ ಘಟನೆ ಅ 21ರ ಮುಂಜಾನೆ ವೇಳೆ ಸಂಭವಿಸಿದೆ.
ಗಾಯಾಳುಗಳನ್ನು ಸುಳ್ಯ ಗ್ರಾಮದ ಅಜ್ಜಾವರ ನಿವಾಸಿ ಕುಮಾರಿ ಜಿ ಎಸ್ ಶ್ರೀಜಿತ್ (26), ಬೆಂಗಳೂರಿನ ಕೆಪಿಎಂಜಿ ಐಟಿ ಕಂಪೆನಿಯ ಉದ್ಯೋಗಿ ಫರ್ಜಿನಾ ನಾಜರ್, ಬೆಂಗಳೂರಿನ ಡೀಲಿಯೆಟ್ ಐಟಿ ಕಂಪೆನಿಯ ಉದ್ಯೋಗಿ ಕೃಪಾಲ್ ಕೆ ಬಿ ಹಾಗೂ ಕಾರು ಚಾಲಕ ಮಂಜುನಾಥ್ ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಕುಮಾರಿ ಜಿ ಎಸ್ ಶ್ರೀಜಿತ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ತನ್ನ ಜೊತೆ ಬೆಂಗಳೂರಿನ ಕೆಪಿಎಂಜಿ ಐಟಿ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಫರ್ಜಿನ ನಾಜರ್, ಹಾಗೂ ಬೆಂಗಳೂರಿನ ಡೀಲಿಯೆಟ್ ಐಟಿ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕೃಪಾಲ್ ಕೆ ಬಿ ಅವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಚಾಲಕ ಮಂಜುನಾಥ್ ಎಂ ಅವರೊಂದಿಗೆ ಅ 20 ರಂದು ಮದ್ಯರಾತ್ರಿ 12.30ರ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟು, ಅ 21 ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಬಿ ಸಿ ರೋಡಿನ ನಾರಾಯಣ ಗುರು ಸರ್ಕಲ್ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ಮೀರಿ ಸರ್ಕಲಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಜಖಂಗೊಂಡಿದ್ದಲ್ಲದೇ, ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























0 comments:
Post a Comment