ಮಂಗಳೂರು, ಅಕ್ಟೋಬರ್ 21, 2025 (ಕರಾವಳಿ ಟೈಮ್ಸ್) : ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಗ್ರಾಮದ ಲಾಲ್ ಭಾಗ್ ಹ್ಯಾಟ್ ಹಿಲ್ ಅಪಾರ್ಟ್ ಮೆಂಟಿನ 3 ಫ್ಯಾಟ್ ಗಳಿಗೆ ಅ 19 ರ ಮಧ್ಯರಾತ್ರಿ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಣ, ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನ್ ಕಳವುಗೈದ ಪ್ರಕರಣವನ್ನು ಮಿಂಚಿನ ಕಾರ್ಯಾಚರಣೆ ನಡೆಸಿ 20 ಗಂಟೆಗಳ ಅವಧಿಯ ಒಳಗೆ ಮಂಗಳೂರು ಪೊಲೀಸರು ಬೇಧಿಸಿ ಸೊತ್ತುಗಳ ಸಹಿತ ಇಬ್ಬರು ಅಸ್ಸಾಂ ಮೂಲದ ಖದೀಮರನ್ನು ಬಲೆಗೆ ಕೆಡವಿದ್ದಾರೆ.
ಬಂಧಿತ ಆರೋಪಿಗಳನ್ನು ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆ, ಮೆಹರ್ ಪುರ್, ಪಾಂಚಗೋಡಿ, ಮೇಡಿನೋವಾ ರಸ್ತೆಯ ಅಂಬಿಕಾ ಪುರ್ ಪಾರ್ಟ್ 10 ರ ನಿವಾಸಿ ರವೀಂದೋ ದಾಸ್ ಎಂಬವರ ಪುತ್ರ ಅಭಿಜಿತ್ ದಾಸ್ (24) ಹಾಗೂ ಕಾಚಾರ್ ಜಿಲ್ಲೆ ಮೆಹರ್ ಪುರ ಗ್ರಾಮದ ಶ್ರೀ ದುರ್ಗಾ ಮಂದಿರ ಹತ್ತಿರದ ನಿವಾಸಿ ದಿಲೀಪ್ ಕುಮಾರ್ ಎಂಬವರ ಪುತ್ರ ದೇಬಾ ದಾಸ್ (21) ಎಂದು ಹೆಸರಿಸಲಾಗಿದೆ.
ಅ 19-20 ರ ಮಧ್ಯರಾತ್ರಿ ವೇಳೆ ಉರ್ವಾ ಪೆÇಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ ಲಾಲ್ ಬಾಗ್ ಹ್ಯಾಟ್ ಹಿಲ್ ಎಂಬಲ್ಲಿನ ಅಪಾರ್ಟ್ ಮೆಂಟ್ ನಲ್ಲಿರುವ 3 ಫ್ಲಾಟ್ ಗಳಿಗೆ ನುಗ್ಗಿದ ಕಳ್ಳರು ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು, 5 ಸಾವಿರ ರೂಪಾಯಿ ನಗದು ಹಣ, 3 ಸಾವಿರ ದಿರ್ಹಂ ಹಾಗೂ ಮೊಬೈಲ್ ಫೆÇೀನ್ ಕಳ್ಳತನ ಮಾಡಿರುವ ಬಗ್ಗೆ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ದಿನಾಂಕ ಅ 20 ರಂದು ಬೆಳಿಗ್ಗೆ ಉರ್ವಾ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2025 ಕಲಂ 331(4), 305(ಎ) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿತ್ತು.
ಹಿರಿಯ ಪೆÇಲೀಸ್ ಅಧಿಕಾರಿಗಳು ಸೇರಿದಂತೆ ಉರ್ವ ಪೆÇಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಶ್ವಾನದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ತಂಡವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಆರೋಪಿ ಪತ್ತೆ ಕಾರ್ಯವನ್ನು ನಡೆಸಿದೆ. ಪ್ರಕರಣ ದಾಖಲಾಗಿ ಸುಮಾರು 20 ಗಂಟೆಗಳ ಒಳಗಾಗಿ ಶೀಘ್ರ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರು ಅಂತರಾಜ್ಯ ಮನೆ ಕಳ್ಳರನ್ನು ಅ 21ರ ಬೆಳಗಿನ ಜಾವ ಬೆಂಗಳೂರಿನಲ್ಲಿ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕಳವುಗೈದ ಚಿನ್ನಾಭರಣಗಳನ್ನು, 5 ಸಾವಿರ ರೂಪಾಯಿ ನಗದು ಹಣ, ರೂ 5000/- ನಗದು ಹಣ, 70 ಸಾವಿರ ಬೆಲೆಯ 3 ಸಾವಿರ ದಿರ್ಹಂ ಹಾಗೂ ಮೊಬೈಲ್ ಫೆÇೀನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ ಈ ಮೊದಲು ಬೆಂಗಳೂರು ನಗರ ಮತ್ತು ಅಸ್ಸಾಂ ಸೇರಿದಂತೆ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ. ಮೇಲಾಧಿಕಾರಿಗಳ ನಿರ್ದೇಶನದಂತೆ, ಉರ್ವಾ ಪೆÇಲೀಸರ ತಂಡವು ಬೆಂಗಳೂರಿನಲ್ಲಿ ಸದ್ರಿ ಆರೋಪಿಗಳನ್ನು ಅ 21 ರಂದು ಬೆಳಗ್ಗಿನ ಜಾವ ಬೆಂಗಳೂರು ನಗರ ಪೆÇಲೀಸರ ಸಹಕಾರದಿಂದ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೆÇಲೀಸ್ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಮತ್ತು ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗೊಳಪಡಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಸಿಪಿ (ಕ್ರೈಂ) ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಉಪ ವಿಭಾಗದ ಎಸಿಪಿ, ಉರ್ವ ಪೆÇಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಂಗಳು ಭಾಗವಹಿಸಿದ್ದರು.

























0 comments:
Post a Comment