ಮಂಗಳೂರು, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ಸಾಮಾಜಿಕ ಜಾಲ ತಾಣದಲ್ಲಿ ಆತಂಕಕಾರಿ ಸಂದೇಶ ರವಾನೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಮುಲ್ಕಿ ಠಾಣಾ ಪೊಲೀರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು, ಶಾಂತಿನಗರ ಮೆಹನಾಝ್ ಮಂಝಿಲ್ ನಿವಾಸಿ ಟಿ ಎ ಮೊಯಿದಿನ್ ಎಂಬವರ ಪುತ್ರರಾದ ಮೊಹಮ್ಮದ್ ಅನ್ವರ್ (44) ಹಾಗೂ ತಾಯಿರ್ ನಕಾಶ್ (42) ಎಂದು ಹೆಸರಿಸಲಾಗಿದೆ.
ಅ 15 ರಂದು ಸೋಷಿಯಲ್ ಮೀಡಿಯಾದಲ್ಲಿ ಓರ್ವ ವ್ಯಕ್ತಿಯು ಬ್ಯಾರಿ ಭಾಷೆಯಲ್ಲಿ ಮಾತಾಡುತ್ತಾ ಸಮಾಜದಲ್ಲಿ ಕೋಮು ಗಲಭೆಯಾಗುವಂತಹ ಕೃತ್ಯಕ್ಕೆ ಕಾರಣವಾಗುವ ಸಂದೇಶವನ್ನು ರವಾನಿಸಿದ್ದಾನೆ. ಈ ಸಂದೇಶದಲ್ಲಿ ‘ಒಂದು ಗ್ಯಾಂಗ್ ಇದೆ ಯಾರು ಕ್ಯಾರ್ ಲೆಸ್ ಮಾಡಬೇಡಿ, ಖಾಲಿ ಬಜಪೆ, ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಬಜಪೆ ಮತ್ತು ಸುರತ್ಕಲ್ ಜನರು ಮಾತ್ರ ಕ್ಯಾರ್ ಫುಲ್ ಆಗಿರುವುದಲ್ಲ. ಕಿನ್ನಿಗೋಳಿಯವರು ಕ್ಯಾರ್ ಫುಲ್ ಆಗಿರಬೇಕಾಗುತ್ತದೆ ಹಾಗೂ ಎಲ್ಲಾ ಕುಡುಕರ ಗ್ಯಾಂಗ್ ಇರುವುದು ಭಟ್ಟಕೋಡಿ ಬಾರ್ ನಲ್ಲಿ. ನಾನು ಖುದ್ದು ಅವರ ಟೀಮ್ ಎಲ್ಲಾ ಭಟ್ಟಕೋಡಿಯಲ್ಲಿ ನೋಡಿದ್ದೇನೆ. ಸುಮಾರು ಒಂದೂವರೆ ತಿಂಗಳ ಹಿಂದೆ 15 ಜನ ಭಟ್ಟಕೋಡಿಯಲ್ಲಿ ಕುಡಿದು ಪಾರ್ಟಿ ಮಾಡಿ ಹೋಗಿದ್ದಾರೆ. ಯಾರೂ ಕ್ಯಾರ್ ಲೆಸ್ ಮಾಡಬೇಡಿ ಎಂಬಿತ್ಯಾದಿಯಾಗಿ ಇರುವಂತಹ ಸಾರ್ವಜನಿಕರಲ್ಲಿ ಆಂತಕ ಮೂಡಿಸುವಂತಹ ಸುಳ್ಳು ಮಾಹಿತಿಯನ್ನು ವ್ಯಾಟ್ಸಾಪ್ ಗ್ರೂಪಿನಲ್ಲಿ ಶೇರ್ ಮಾಡಿದ್ದಾನೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2025 ಕಲಂ 353(2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
ಸಂದೇಶದ ಬೆನ್ನು ಬಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬರುವಂತಹ ಇಂತಹ ಆಂತಕಕಾರಿ ಸಂದೇಶಗಳ ಬಗ್ಗೆ ಸಾರ್ವಜನಿಕರು ಗಮನ ಕೊಡದೇ ಇಂತಹ ಸಂದೇಶಗಳನ್ನು ಶೇರ್ ಮಾಡದಂತೆ ಮಂಗಳೂರು ನಗರ ಪೆÇಲೀಸ್ ಆಯುಕ್ತ ಸುಧೀರ್ ರೆಡ್ಡಿ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

















0 comments:
Post a Comment